ಕಾರವಾರ :- ಗೋವಾದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ನಲ್ಲಿ ಅಡಗಿಸಿಡಲಾಗಿದ್ದ ಗೋವಾ ಮದ್ಯವನ್ನು ಕಾರವಾರದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ
ಅಬಕಾರಿ ಪೊಲೀಸರು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದಾರೆ.

ಗೋವಾದ ವಿವಿಧ ಬ್ರಾಂಡ್ ನ ಸುಮಾರು 72 ಲೀಟರ ಗೋವಾ ಮದ್ಯ ಹಾಗೂ ಬಸ್ ನನ್ನು ವಶಕ್ಕೆ ಪಡೆದು, ಒಟ್ಟೂ ಅಂದಾಜು 25,95000 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಮೂಲದ ಲಿಂಗನಗೌಡ ಪಾಟೀಲ್ (63) ಬಂಧಿತ ವ್ಯಕ್ತಿಯಾಗಿದ್ದು ಗೋವಾದಿಂದ ಬೆಂಗಳೂರಿಗೆ ಬಸ್ ಸಂಚರಿಸುವ ವೇಳೆ ಸೀಟ್ ನ ಕೆಳಭಾಗದ ಕ್ಯಾಬಿನ್ ನಲ್ಲಿ 72 ಲೀಟರ್ ಗೋವಾ ಮದ್ಯವನ್ನು ಹುದುಗಿಸಿಟ್ಟಿದ್ದರು.

RELATED ARTICLES  ಸೇವಾ ಮನೋಭಾವನೆ ಬೆಳೆಸಿಕೊಳ್ಳಿ :ಶ್ರೀಮತಿ ಶಾರದಾ ಮೋಹನ ಶೆಟ್ಟಿ

ಖಚಿತ ಮಾಹಿತಿ ಪಡೆದ ಅಬಕಾರಿ ಇನ್ಸಪೆಕ್ಟರ್ ಸದಾಶಿವ್ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಬಸ್ ತಡೆದು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮತ್ತೆ ಸದ್ದುಮಾಡುತ್ತಿದೆ ಅಕ್ರಮ ಗೋ ಸಾಗಾಟ