ಶಿರಸಿ: ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಸ್ಪೀರಿಟನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ವಶಪಡಿಸಿಕೊಂಡು ನಾಶ ಮಾಡಿರುವ ಘಟನೆ ನಡೆದಿದೆ.
ಸುಮಾರು 149 ಕ್ಯಾನ್ ನಲ್ಲಿದ್ದ ತಲಾ 35 ಲೀಟರ್ ನ ಅಂದಾಜು 2.97 ಲಕ್ಷ ಮೌಲ್ಯದ ಅಕ್ರಮ ಸ್ಪೀರಿಟನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆಯವರು ಜಿಲ್ಲಾ ನ್ಯಾಯಾಲಯದ ಸೂಚನೆಯ ಪ್ರಕಾರ ಮದ್ಯಸಾರವನ್ನು ನಾಶಪಡಿಸಲಾಯಿತು.

RELATED ARTICLES  ಕಲ್ಲು ತುಂಬಿದ ಲಾರಿ ಪಲ್ಟಿ..!

ಮದ್ಯಸಾರ ನಾಶದ ವೇಳೆ ಅಬಕಾರಿ ಉಪಾಧೀಕ್ಷಕ ಎಚ್‌.ಎಸ್‌. ಶಿವಪ್ಪ, ಅಬಕಾರಿ ನಿರೀಕ್ಷಕರಾದ ಜ್ಯೋತಿ ನಾಯ್ಕ, ಡಿ.ಎನ್. ಶಿರಸಿಕರ, ಸಿಬ್ಬಂದಿಗಳಾದ ಎನ್.ಕೆ. ವೈದ್ಯ, ಗಜಾನನ ಎಸ್. ನಾಯ್ಕ, ಸವಿತಾ ಲಂಕರ, ಗಂಗಾಧರ ಎಸ್.ಕಲ್ಲೇದ, ಲೋಕೇಶ
ಬೋರಕರ ಇತರರು ಇದ್ದರು.

RELATED ARTICLES  ಶಿರಸಿ: ನಾನು ಎಲ್ಲಿಗೆ ಹೋದರು ಸ್ಥಳ ಶುದ್ಧೀಕರಣ ಮಾಡುತ್ತೀರಾ? ಪ್ರಕಾಶ್ ರೈ