ಕುಮಟಾ : ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ವಿದ್ಯಾರ್ಥಿಯಾಗಿದ್ದಾಗ ಒಳ್ಳೆಯ ಪುಸ್ತಕಗಳನ್ನು ಓದಿದರೆ ಅದು ಒಳ್ಳೆಯ ಭವಿಷ್ಯವನ್ನು ರೂಪಿಸುತ್ತದೆ. ಪುಸ್ತಕದ ಪ್ರೇಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಪುಸ್ತಕಗಳೇ ನಿಜವಾದ ಸಂಪತ್ತು. ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಅದು ಸಮಾಜದಲ್ಲಿ ನಾವು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ ಎಂದು ವಿಜ್ಞಾನಿ ಡಾ. ಅಶೋಕ ಪ್ರಭು ಹೇಳಿದರು. ಅವರು ಸ.ಹಿ.ಪ್ರಾ ಶಾಲೆ ಕಡ್ನೀರಿನಲ್ಲಿ ಪುಸ್ತಕ ಖರೀದಿಗಾಗಿ 25 ಸಾವಿರ ರೂ. ಸಹಾಯಧನ ನೀಡಿ ಮಾತನಾಡಿದರು. 

RELATED ARTICLES  ಕೊರೋನಾ ಸಂದರ್ಭದ ಸೇವೆಗೆ ಪ್ರೋತ್ಸಾಹ ಧನ ನೀಡುವಲ್ಲಿ ಸರಕಾರ ವಿಫಲ : ಕಾರವಾರದಲ್ಲಿ ವೈದ್ಯರುಗಳಿಂದ ಪ್ರತಿಭಟನೆ.

ಪುಸ್ತಕಗಳು ಜ್ಞಾನ ದಾಹವನ್ನು ಹೆಚ್ಚಿಸುತ್ತವೆ. ಬದುಕಿನ ಭರವಸೆಯನ್ನು ಹೆಚ್ಚಿಸುತ್ತದೆ. ಪುಸ್ತಕದ ಓದಿನಿಂದ ನಮ್ಮ ಜ್ಞಾನಾವೃದ್ದಿಯಾಗುವ ಜೊತೆಗೆ, ಬದುಕಿನಲ್ಲಿ ವಿಶ್ವಾಸ ಮೂಡುತ್ತದೆ ಎಂದು ಅವರು ಹೇಳಿದರು.

ಸಹಾಯವನ್ನು ಸ್ವೀಕರಿಸಿದ ಮುಖ್ಯಾಧ್ಯಾಪಕಿ ಶಾರದಾ ಶರ್ಮಾ ಮಾತನಾಡಿ, ಅಶೋಕ ಪ್ರಭು ಅವರು ಹಳ್ಳಿಯಲ್ಲಿ ಓದಿ ದೊಡ್ಡ ಹೆಸರು ಮಾಡಿದವರು. ಅವರ ಸರಳತೆ, ಸೌಜನ್ಯಪೂರಿತವಾದ ನಡವಳಿಕೆ, ಉದಾರತೆ ನಮಗೆಲ್ಲರಿಗೂ ಮಾದರಿ. ಈ ಶಾಲೆಯಲ್ಲಿ ಕಲಿತ ಪೂರ್ವ ವಿದ್ಯಾರ್ಥಿಗಳಿಗೆಲ್ಲರಿಗೂ ಇವರು ಮಾದರಿಯಾಗಲಿ ಎಂದರು. 

RELATED ARTICLES  ಗಿಬ್ ಬಾಲಕಿಯರ ಪ್ರೌಢ ಶಾಲೆ ಕುಮಟಾದ ಹೆಮ್ಮೆಯ ವಿದ್ಯಾರ್ಥಿನಿ ನಿಖಿತಾ ಗೌಡ ರಾಷ್ಟ್ರ ಮಟ್ಟಕ್ಕೆ

ಈ ಸಂದರ್ಭದಲ್ಲಿ ಶಿಕ್ಷಕರಾದ ಜ್ಯೋತಿ ಶೇಟ್, ಹನುಮಂತ ನಾಯ್ಕ, ಭಾರತಿ ನಾಯ್ಕ ಮತ್ತು ವಿದ್ಯಾರ್ಥಿಗಳು ಇದ್ದರು.