ಕುಮಟಾ : ಇಲ್ಲಿನ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕುಮಟಾ ಹಾಗೂ ಸರಕಾರಿ ಪ್ರೌಢಶಾಲಾ ನೌಕರರ ಸಂಘ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿತವಾದ ತಾಲೂಕಾ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2023 ರ ವಿವಿಧ ಸ್ಪರ್ಧೆಗಳಲ್ಲಿ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

RELATED ARTICLES  10 Лучших Трендовых Индикаторов

ಸೃಜನಾ ಡಿ. ನಾಯಕ (ಭಾವಗೀತೆ), ಪ್ರಾರ್ಥನಾ ತಳ್ಳಳ್ಳಿ (ಕವನ ವಾಚನ), ಯುತಿಕಾ ಪ್ರಭು (ಜನಪದಗೀತೆ), ಪಾವನಿ ಎಮ್. ನಾಯ್ಕ (ಇಂಗ್ಲೀಷ್ ಭಾಷಣ), ಪಾವನಿ ಎಸ್. ನಾಯ್ಕ (ರಂಗೋಲಿ), ವೈಷ್ಣವಿ ಹೆಗಡೆ (ಸಂಸ್ಕೃತ ಭಾಷಣ), ದಿಶಾ ಡಿ. ನಾಯ್ಕ (ಭರತನಾಟ್ಯ), ರಾಹುಲ್ ಭಟ್ಟ ಮತ್ತು ಸ್ನೇಹಾ ನಾಯ್ಕ (ಕ್ವಿಝ್) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

RELATED ARTICLES  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಸಾವು : ಇವರ ಗುರುತು ಸಿಕ್ಕರೆ ಮಾಹಿತಿ ನೀಡಿ.

ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಹಾಗೂ ಪಾಲಕರು ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.