ಮುಂಡಗೋಡ:ನಾವೆಲ್ಲರೂ ಸುಳ್ಳು ಹೇಳುವುದು ಕಲಿಯ ಬೇಕಾದರೆ ಪ್ರಧಾನಿ ಮೋದಿಯವರಿಂದ ಕಲಿಯಬೇಕಿದೆ ಎಂದು ಮಾಜಿ ಸಚಿವ ಅಲ್ಕೋಡ್ ಹನಮಂತಪ್ಪರವರು ಮೋದಿ ವಿರುದ್ಧ ಹರಿಹಾಯ್ದರು.
ಅವರು ಮಂಗಳವಾರ ಮಧ್ಯಾಹ್ನ ಟೌನ್‍ಹಾಲ್‍ನಲ್ಲಿ ರೈತ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು, ಮೋದಿಯವರು ಚುನಾವಣೆ ಪೂರ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಕಪ್ಪು ಹಣತಂದು 15ಲಕ್ಷ ರೂ ನಂತೆ ಪ್ರÀತಿಯೊಬ್ಬರ ಮನೆ ಮನೆಗೆ ತಲುಪಿಸುತ್ತೇನೆ ಎಂದು ಹೇಳಿದ ಅವರು 3 ವರ್ಷವಾದರು ಯಾವ ಬಡವನಿಗೂ ನಯಾಪೈಸೆ ಸಿಗಲಿಲ್ಲಾ. ಮತ್ತು ಪ್ರತಿ ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು, ಒಂದು ವರ್ಷಕ್ಕೆ 2 ಕೋಟಿ ಅಲ್ಲಾ 5 ವರ್ಷ ಪೂರ್ಣ ಮಾಡಿದರು 1 ಲಕ್ಷ ಉದ್ಯೋಗ ಸೃಷ್ಟಿ ಮಾಡಲೂ ಸಾಧ್ಯವಾಗಲ್ಲಾ, ಮತ್ತು ದೇಶದ ಜನರಿಗೆ ಅಚ್ಛೆದಿನ ಬರುತ್ತೆ ಅಂದ್ದಿದÀರೂ ಅದರ ಬದಲಿಗೆ ಬಿ.ಜೆ.ಪಿ ಮುಖಂಡರುಗಳಿಗೆ ಮಾತ್ರ ಅಚ್ಛೆದಿನ ಬಂದಿದೆ. ಎಂದು ಖಾರವಾಗಿ ಹೇಳಿದರು. ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದ ಎಚ್.ಡಿ ದೇವೆಗೌಡರು, ಮತ್ತು ಮನಮೋಹನಸಿಂಗ ಸರ್ಕಾರ ನಡೆಸಿದರು ಆ ವೇಳೆ 9 ರಿಂದ 10 ಜಿ. ಡಿ ಪಿ. ಇತ್ತು. ಈಗ ದೇಶದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಜೆ.ಡಿಪಿ. 5ಕ್ಕೆ ಕುಸಿದು ದೇಶಕ್ಕೆ ಕಂಟಕವಾಗಿ ಪರಿಣಿಮಿಸಿದೆ. ರೈತರ ಉಪಕರಣಗಳಿಗೆ ಸಬ್ಸಿಡಿ ನೀಡಿದ್ದು ದೇವೆಗೌಡ್ರು ಪ್ರಧಾನ ಮಂತ್ರಿ ಇದ್ದಾಗ. ಇನ್ನ ಮುಂದೆ ಮೋದಿಯವರಿಗೆ ಅಧಿಕಾರ ಕೊಟ್ಟರೆ ದೇಶವನ್ನೆ ನಿರ್ನಾಮ ಮಾಡುತ್ತಾರೆ ಎಂದ ಅವರು ಮುಂದಿನ ಚುನಾವಣೆಯಲ್ಲಿ ರಾಷ್ಟ್ರಿಯ ಪಕ್ಷಗಳಿಗೆ ಮತ ಹಾಕದೇ ಕರ್ನಾಟಕದಲ್ಲಿರುವ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳಕ್ಕೆ ಮತ ಹಾಕಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯಾಗಿ ಮಾಡೋಣ ಎಂದು ಕರೆ ನೀಡಿದರು.
ರಾಜ್ಯ ರೈತ ಮೊರ್ಚಾ ಅಧ್ಯಕ್ಷ ಗಂಗಾಧರ ಪಾಟೀಲಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ರೈತ ಪರವಾದ ಪಕ್ಷ ಯಾವುದಾದರೂ ಇದೆ ಎಂದಾದರೆ ಅದು ಜೆಡಿಎಸ್ ಮಾತ್ರ. 20 ತಿಂಗಳ ಆಡಳಿತ ನಡೆಸಿದ ಕುಮಾರಸ್ವಾಮಿ ಅವರ ಜನಪರ ಆಡಳಿತದಲ್ಲಿ ರೈತ ಪರವಾದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ರೈತ ಕುಲ ಸಂತೋಷವಾಗಿರಬೇಕಾದರೆ ಜಾತ್ಯತೀತ ಜನತಾ ದಳ ಮತ್ತೆ ಅಧಿಕಾರಕ್ಕೆ ಬರಬೇಕಿರುವುದು ಅನಿವಾರ್ಯ. ಶೇ 80ರಷ್ಟು ರೈತರ ಉತ್ಪನ್ನದಿಂದ ದೇಶ ಉಳಿದಿದೆ. ರೈತರ ವಿರೋಧಿ ಮತ್ತು ರೈತರ ಸಾವಿನ ಜೊತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಚಲ್ಲಾಟವಾಡುತ್ತಿದೆ. ರೈತರ ಸಾಲಮನ್ನಾ ಮಾಡುವುದರ ಬದಲು ಉದ್ಯಮಿಗಳು ಬ್ಯಾಂಕಿನಲ್ಲಿ ಮಾಡಿದ ಸಾಲಮನ್ನಾ ಮಾಡುವುದು ಮತ್ತು ಉದ್ಯಮಿಗಳ ಪರವಾಗಿ ಈ ಮೋದಿ ಸರ್ಕಾರ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲಾ ಬರಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಮುಂದಿನ 2018ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ನೀಡಿ. ಕುಮಾರಸ್ವಾಮಿಯವರಿಗೆ ಅಧಿಕಾರ ಬಂದ 24 ತಾಸಿನಲ್ಲಿ ರೈತರ ಪೂರ್ಣ ಸಾಲಮನ್ನ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆ ಜೆಡಿಎಸ್ ಪ್ರಮುಖ ಪಾತ್ರವಹಿಸಲಿದೆ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯಾಗುವರು ಎಂದು ಭವಿóಷ್ಯ ನುಡಿದರು.
ಸಮಾವೇಶದಲ್ಲಿ ರಾಜ್ಯ ಸಂಘಟನಾ ಯುವ ಕಾರ್ಯದರ್ಶಿ ಸಂತೋಷ ರಾಯ್ಕರ, ರಾಜ್ಯ ಕಾರ್ಯದರ್ಶಿಗಳಾದ ಜಿ.ಎನ್ ಗೌಡ್ರ್ರು, ಮುನಾಫ ಮಿರ್ಜಾನಕರ, ಇನಾಯಿತುಲ್ಲಾ ಶಾಬದಿ,್ರ ರಾಜೇಶ್ವರಿ ಹೆಗಡೆ, ಮಾತನಾಡಿದರು.
ಈ ವೇಳೆ ಜಿಲ್ಲೆಯಿಂದ ರಾಜ್ಯ ಪದಾಧಿಕಾರಿಗಳಾಗಿ ನಿಯುಕ್ತಗೊಂಡ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಮತ್ತು ರಾಜ್ಯ ಸಂಘಟನಾ ಯುವ ಕಾರ್ಯದರ್ಶಿ ಸಂತೋಷ ರಾಯ್ಕರ, ನೇತೃತ್ವದಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಕಾರ್ಯಕರ್ತರು ರಾಜ್ಯ ಮುಖಂಡರ ಸಮ್ಮುಖದಲ್ಲಿ ಜೆ.ಡಿ.ಎಸ್‍ಗೆ ಸೇರ್ಪಡೆಯಾದರು.
ವೇದಿಕೆಯಲ್ಲಿ ಮಹಿಳಾ ರಾಜ್ಯ ರೈತ ಯುವ ಮೋರ್ಚಾ ಅಧ್ಯಕ್ಷೆ ಚೈತ್ರಾ ಗೌಡಾ, ಜಿಲ್ಲಾ ರೈತ ಯುವ ಮೋರ್ಚಾ ಅಧ್ಯಕ್ಷ ತುಕಾರಾಮ ಗುಡ್ಕರ, ರಾಜ್ಯ ಮುಖಂಡರುಗಳಾದ ಆನಂದ ಗೌಡ್ರ, ಬಾವಾಜಿ, ವಿಕಾಸ, ಮುಂತಾದವರಿದ್ದರು. ತುಕಾರಾಮ ಗುಡ್ಕರ, ಸ್ವಾಗತಿಸಿ ನಿರೂಪಿಸಿದರು. ಜಿ.ಎನ್ ಗೌಡ್ರ್ರು, ವಂದಿಸಿದರು.
ಸಭಾ ಕಾರ್ಯಕ್ರಮ ಪೂರ್ವದಲ್ಲಿ ಜೆಡಿಎಸ್ ರೈತ ಮೋರ್ಚಾದಿಂದ ರೈತರ ಅಶೋತ್ತರಗಳಿಗೆ ಸ್ಪಂದಿಸುವಂತೆ ಪ್ರತಿಭಟನೆ ಹಮ್ಮಿಕೊಂಡು ತಹಶೀಲ್ದಾರರಿಗೆ ಮನವಿ ಅರ್ಪಿಸಲಾಯಿತು.
ಜೆಡಿಎಸ್ ಕಾರ್ಯಕ್ರಮದ ಉಸ್ತುವಾರಿಯನ್ನು ರಾಜ್ಯ ಸಂಘಟನಾ ಯುವ ಕಾರ್ಯದರ್ಶಿ ಸಂತೋಷ ರಾಯ್ಕರ ವಹಿಸಿದ್ದರು