ಕುಮಟಾ: ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ರುಕ್ಮಾಂಗದ ಹನುಮಂತ ಮಡಿವಾಳ ಮಣಕಿ ಮೈದಾನದಲ್ಲಿ ನಡೆದ 14 ವರ್ಷ ವಯೋಮಾನದ ಒಳಗಿನ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಟಿ.ಜಿ.ಟಿ. ವಿಭಾಗದ ಉದ್ದ ಜಿಗಿತದಲ್ಲಿ ಪ್ರಥಮ ಶ್ರೇಯಾಂಕ ಗಳಿಸುವುದರೊಂದಿಗೆ ಕಾರವಾರದ ಹಳಗಾದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ತಾಲೂಕನ್ನು ಪ್ರತಿನಿಧಿಸಲಿದ್ದಾನೆ. ಗುಂಡು ಎಸೆತದಲ್ಲಿ ದ್ವಿತೀಯ ಶ್ರೇಯಾಂಕ ಪಡೆತ ಈತನ ಮುಂದಿನ ಹಂತದ ಯಶಸ್ಸಿಗೆ ಶಾಲಾ ಮುಖ್ಯಾಧ್ಯಾಪಕರಾದಿಯಾಗಿ ಸರ್ವ ಶಿಕ್ಷಕ ಶಿಕ್ಷಕೇತರ ವೃಂದ, ಪಾಲಕ ಸಮೂಹ ಶುಭೇಚ್ಛೆಯನ್ನು ಕೋರಿದೆ.