ಕಾರವಾರ : ಶಿವನ ಆತ್ಮಲಿಂಗ ಇರುವ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಸೆ 27, 28 ಹಾಗೂ 29 ರಂದು ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ಆಯುರಾರೋಗ್ಯದ ವೃದ್ಧಿಗಾಗಿ ಮಹಾರುದ್ರ ಯಾಗ ನಡೆಸುತ್ತಿರುವುದಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು‌.

ಕಾರವಾರದ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿದ ಅವರು ಮೋದಿ ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಡಲಿ ಎಂದು ಮಹಾರುದ್ರ ಯಾಗ ಮಾಡಲಾಗುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮೋದಿ ಪ್ರಧಾನಿ ಆಗಲೆಂದು ಯಾಗ ಹಮ್ಮಿಕೊಂಡಿದ್ದೇನೆ. ನೂರಾರು ವೈದಿಕರಿಂದ ಮೂರು ದಿನಗಳ ಕಾಲ ಪೂಜಾ ಕಾರ್ಯಾಕ್ರಮ ನಡೆಯಲಿದೆ. ಮೋದಿ ಅಭಿಮಾನಿಗಳು ಸಾರ್ವಜನಿಕರು ಆಗಮಿಸಿ, ಮೋದಿ ಅವರಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದರು. ಮೋದಿ ,ಅಮಿತ್ ಶಾ ಅವರಿಗೂ ಆಮಂತ್ರಣ ಹೋಗಿದೆ. ಅವರು ಬರದಿದ್ದರೂ, ಅವರ ಸಂದೇಶ ಬರಲಿದೆ ಎಂದರು.

RELATED ARTICLES  ಗೋಕರ್ಣದಲ್ಲಿ ಶಿವರಾತ್ರಿ ನಿಮಿತ್ತ ನಡೆಯಲಿರುವ ದೈವಿಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿವೆ

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಮೂಲಕ ನಾನಾ ಸಮಾಜಸೇವಾ ಕಾರ್ಯ ಮಾಡುತ್ತ ಬಂದಿದ್ದೆನೆ. ಮೊದಲು ಸಾಮಾಜಿಕ ಸೇವೆಯನ್ನು ಕೇವಲ ಬೆಂಗಳೂರಿನ ಯಶವಂತಪುರದಲ್ಲಿ ಮಾತ್ರ ಮಾಡುತ್ತಿದ್ದೆ. ಆದರೆ ಈಗ ಶಿರಸಿಗೂ ವ್ಯವಹಾರ ವಿಸ್ತರಿಸಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಕಿತ್ತೂರು,‌ ಖಾನಾಪುರ ಭಾಗದಲ್ಲಿಯೂ ಸಹ ಸಾಮಾಜಿಕ ಕಾರ್ಯ ಮಾಡುವೆ ಎಂದರು‌. 43 ಶಾಲೆಗಳಿಗೆ ಶುದ್ಧ ನೀರಿನ ಘಟಕ ಮಾಡಿಸಿದ್ದೇನೆ. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುತ್ತಿದ್ದೇನೆ. ಆಟೋ ಚಾಲಕರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡುತ್ತಿರುವೆ. ಆಟೋ ಚಾಲಕರಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಅವರಿಗೆ ನೆರವು ನೀಡುವಲ್ಲಿ ನನಗೆ ಸಮಾಧಾನವಿದೆ ಎಂದರು. ಸಾಮಾಜಿಕ ಸೇವೆ ಮಾಡುವ ಮನಸ್ಸು ಬಂತು, ಮಾಡಲು ಆರಂಭಿಸಿದೆ.‌ ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದರು.‌

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 95 ಜನರಿಗೆ ಕರೋನಾ ಪಾಸಿಟಿವ್

ಯೋಗ್ಯತೆ ಇದ್ದರೆ ಯೋಗ ತಾನಾಗಿಯೇ ಬರಲಿದೆ.‌ ನನ್ನ‌ ಹಣೆಬರಹದಲ್ಲಿ ಎಂಪಿ ಟಿಕೆಟ್ ಸಿಗಬೇಕು ಅಂತಿದ್ದರೆ ,ಅದು ತಾನಾಗಿಯೇ ಒಲಿದು ಬರಲಿದೆ. ನಾನಾಗಿಯೇ ಟಿಕೆಟ್ ಕೇಳಲ್ಲ. ಅವರಾಗಿಯೇ ಕೊಟ್ಟರೆ ಬಿಡಲ್ಲ. ಚುನಾವಣೆ ಎದುರಿಸುವೆ ಎಂದರು.

ರಾಜಕೀಯ ಕಾರಣಕ್ಕೆ ಸಾಮಾಜಿಕ ಸೇವೆ ಮಾಡುತ್ತಿಲ್ಲ:
ರಾಜಕೀಯ ಕಾರಣಕ್ಕೆ ಸಾಮಾಜಿಕ ಸೇವೆ ಮಾಡುತ್ತಿಲ್ಲ. ಉದ್ಯಮದಲ್ಲಿ ಬಂದ ಲಾಭದ ಒಂದಂಶವನ್ನು ಜನತೆಗೆ ಬಳಸುತ್ತಿದ್ದೇನೆ. ಮುಂದೆ ಪೌರಕಾರ್ಮಿಕರ ಹಿತಕ್ಕೆ ಕೆಲಸ ಮಾಡುವೆ ಎಂದರು‌ . ಕಾರವಾರ, ಅಂಕೋಲಾ, ಸಿದ್ದಾಪುರ ಆಟೋ ಚಾಲಕರಿಗೆ ಬಟ್ಟೆ , ಇನ್ಸುರೆನ್ಸ್ ವಿಷಯದಲ್ಲಿ ಸಹಾಯ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಂತೋಷ ನಾಯ್ಕ ಬ್ಯಾಗದ್ದೆ ಇದ್ದರು‌.