ಕುಮಟಾ : ಭಾರತೀಯ ಜನತಾ ಪಾರ್ಟಿಯ ಧ್ಯೇಯ ವಾಕ್ಯವಾಗಿರುವ ‘ಸೇವೆಯೇ ಸಂಘಟನೆ’ಯ ಭಾಗವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಪ್ರಯುಕ್ತ ಕುಮಟಾ ಮಂಡಲ ಬಿಜೆಪಿ ಎಸ್. ಸಿ. ಮೋರ್ಚಾ ವತಿಯಿಂದ ಸೋಮವಾರ ಕುಮಟಾದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರವು ನಡೆಯಿತು. 

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ದೀಪಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಕಾರ್ಯಕರ್ತರೆಲ್ಲರೂ ಪುಷ್ಪಾರ್ಚನೆ ಮಾಡಿ ಗೌರವಸಲ್ಲಿಸಿದರು.

ಈ ಸಂದರ್ಭದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ ಸೇವಾ ಪಾಕ್ಷಿಕದ ಮಂಡಲ ಪ್ರಮುಖ ಡಾ. ಜಿ. ಜಿ. ಹೆಗಡೆ, ಉಪಾಧ್ಯಾಯರು ಭಾರತೀಯ ಜನತಾ ಪಕ್ಷದ ಅಧಿಕೃತ ತತ್ವವಾದ ಸಮಗ್ರ ಮಾನವತಾವಾದದ ತತ್ತ್ವವನ್ನು ನೀಡಿದವರು. ಸಾಂಸ್ಕೃತಿಕ-ರಾಷ್ಟ್ರೀಯ ಮೌಲ್ಯಗಳ ಪ್ರಾಮುಖ್ಯತೆ ಮತ್ತು ಶಿಸ್ತಿನ ಮೂಲಭೂತ ವಿಷಯಗಳ ಸುತ್ತ ಇವರ ಸಿದ್ಧಾಂತಗಳು ಇದೆ. ಪಂಡಿತ್ ದೀನದಯಾಳ್ ಉಪಾಧ್ಯಾಯರ ಮುಖ್ಯ ವಿಚಾರಗಳನ್ನು ಅವರ ಭಾರತೀಯತೆ, ಧರ್ಮ, ಧರ್ಮರಾಜ್ಯ ಮತ್ತು ಅಂತೋದಯ ಪರಿಕಲ್ಪನೆಗಳಲ್ಲಿ ಕಾಣಬಹುದು ಎಂದರು. ಮೋದಿಯವರು ಜಾರಿಗೊಳಿಸುತ್ತಿರುವ ಬಹುತೇಕ ಯೋಜನೆಗಳು ಉಪಾಧ್ಯಾಯರ ಕನಸುಗಳನ್ನು ಆಧರಿಸಿ ಇದೆ ಎಂದು ಅವರು ವಿವರಿಸಿದರು.

RELATED ARTICLES  ಟಿಪ್ಪು ಜಯಂತಿ ಬಿಟ್ಟು ಬೇರಾವುದಕ್ಕೂ ನಮ್ಮನ್ನು ಕರೆಯುವುದೇ ಇಲ್ಲ: ಬೇಸರಿಸಿದ ಕುಮಟಾ ಇಸ್ಲಾಂ ಬಾಂಧವರು.

ಅತ್ಯುನ್ನತ ಶಿಕ್ಷಣವನ್ನು ಪಡೆದಿದ್ದ ಉಪಾಧ್ಯಾಯರು, ತಮ್ಮ ಸ್ವಂತ ಉದ್ಯೋಗಕ್ಕಾಗಲಿ ಅಥವಾ ತಮ್ಮ ಸ್ವಂತ ಜೀವನಕ್ಕಾಗಲಿ ಆದ್ಯತೆ ನೀಡದೆ, ಸಾರ್ವಜನಿಕರ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಮಾದರಿಯಾಗಿದ್ದವರು. ದೇಶದ ಕುರಿತಾಗಿ ಬಹುದೊಡ್ಡ ಕನಸುಗಳನ್ನು ಹೊತ್ತಿದ್ದ ಇವರು ನಮ್ಮೆಲ್ಲರಿಗೆ ಆದರ್ಶಪ್ರಾಯರು ಎಂದು ವಿವರಿಸಿದ್ದರು.

RELATED ARTICLES  ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿ : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜನೆ : ಕರಾಟೆ ಕಲೆಯ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ : ರಾಜೇಂದ್ರ ಭಟ್ಟ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲಾಧ್ಯಕ್ಷರು ಸೇರಿದಂತೆ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಗಮನಸೆಳೆದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ್ ಗಾಂವಕರ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ನಾಯ್ಕ್, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ್, ಮೋಹಿನಿ ಗೌಡ , ಗೀತಾ ಮುಕ್ರಿ, ಸೂರ್ಯಕಾಂತ್ ಗೌಡ, ಶೈಲಾ ಗೌಡ, ಪಕ್ಷದ ಪ್ರಮುಖರಾದ ಎನ್. ಆರ್. ಮುಕ್ರಿ, ಜಯಾ ಶೇಟ್, ಸಂತೋಷ ಹೆಗಡೆ, ಯುವಮೋರ್ಚಾ ಅಧ್ಯಕ್ಷ ಜಗದೀಶ್ ಭಟ್, ಕಲಭಾಗ ಪಂಚಾಯತ್ ಸದಸ್ಯೆ ಮಂಜುಳಾ ಮುಕ್ರಿ, ಪಕ್ಷದ ಅಭಿಮಾನಿಗಳು ವಿವಿಧ ಸ್ಥರದ ಕಾರ್ಯಕರ್ತರು ಭಾಗವಹಿಸಿದ್ದರು.