ಮಂಕಿ : ಸರಕಾರಿ ಪದವಿ ಪೂರ್ವ ಕಾಲೇಜ್ ಮಂಕಿಯಲ್ಲಿ ಎನ್ ಎಸ್ ಎಸ್ ಘಟಕದ 7ನೇ ವಿಶೇಷ ಗ್ರಾಮೀಣ ಶಿಬಿರ ನಡೆಯಿತು. ಚಿಕ್ಕನಕೋಡ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ ಜಿ. ನಾಯ್ಕ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

RELATED ARTICLES  ದೇವರ ಕರಿಮಣಿ ಎಗರಿಸಿದ್ದ ಕಳ್ಳ ಅಂದರ್ : ಹೊರಬಿತ್ತು ಹಲವು ದೇವಾಲಯ ಕಳ್ಳತನ ಪ್ರಕರಣ

ಕಾಲೇಜಿನ ಪ್ರಾಚಾರ್ಯರಾದ ಅರುಣ ನಾಯಕ ಸರ್ವರನ್ನೂ ಸ್ವಾಗತಿಸುತ್ತಾ ಎನ್ ಎಸ್ ಎಸ್ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಉಪಾಧ್ಯಕ್ಷರಾದ ನಾಗೇಶ ಮಾದೇವ ನಾಯ್ಕ ಗಾಂಧೀ ವಿಚಾರಧಾರೆಯನ್ನು ಸ್ಮರಿಸಿದರು.

RELATED ARTICLES  ಉದ್ಯೋಗ ಖಾತ್ರಿ ಯೋಜನೆ ಬಡವನ ಮನೆಯ ಹಣತೆ ಇದ್ದಂತೆ-ಉಮೇಶ ಮುಂಡಳ್ಳಿ

ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರು,ಎಸ್ ಡಿ ಎಂ ಸಿ ಅಧ್ಯಕ್ಷರು, ಊರಿನ ಹಿರಿಯರು ಉಪಸ್ಥಿತರಿದ್ದರು.

ಎನ್ ಎಸ್ ಎಸ್ ಸಂಯೋಜನಾಧಿಕಾರಿ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ನಾಗರಾಜ ಪಟಗಾರ ವಂದಿಸಿದರು.