ಕುಮಟಾ : ತಾಲೂಕಿನ ಕೋಡ್ಕಣಿಯಲ್ಲಿ ಒಂದು ವರ್ಷದ ಹಿಂದಷ್ಟೆ ನಡೆಲಾಗಿದ್ದ, ನೂರಾರು ಅಡಿಕೆ ಸಸಿಗಳನ್ನು ಯಾರೋ ಕಿಡಿಗೇಡಿಗಳು ರಾತ್ರಿ ಬೆಳಗ್ಗಾಗುವಷ್ಟರಲ್ಲಿ ಕಡಿದು ನೆಲಸಮ ಮಾಡಿದ ವಿಚಿತ್ರ ಘಟನೆಯೊಂದು ಸಂಭವಿಸಿದೆ.  

ಇಲ್ಲಿನ ನಿವಾಸಿ ಬಾಲಕೃಷ್ಣ ಶಾನಭಾಗ ಹಾಗೂ ಅವರ ಮಗ ಸಂಜಯ ಶಾನಭಾಗ ಕೋಡ್ಕಣಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಇದ್ದ ತಮ್ಮ ಜಮೀನಿನಲ್ಲಿ ಕಳೆದ ವರ್ಷ 324 ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಅನ್ಯಾನ್ಯ ಕಾರಣದಿಂದ 50 ಗಿಡಗಳು ಬೆಳೆಯದಿದ್ದದ್ದನ್ನು ನೋಡಿ ಹೊಸದಾಗಿ ಮತ್ತೆ ಈ ಶ್ರಾವಣದಲ್ಲಿ 50 ಗಿಡಗಳನ್ನು ನೆಟ್ಟಿದ್ದು, ಅವುಗಳ ಆರೈಕೆ ಮಾಡಿಕೊಂಡು ಬಂದಿದ್ದರು. ಆದರೆ ರವಿವಾರ ರಾತ್ರಿ ಯಾರೋ ಕಿಡಿಗೇಡಿಗಳು ಬಾಲಕೃಷ್ಣ ಅವರ ಅಡಿಕೆ ತೋಟಕ್ಕೆ ಅಕ್ರಮವಾಗಿ ನುಗ್ಗಿ, ಈಗತಾನೇ ಚಿಗುರೊಡೆದು ಬೆಳೆಯುತ್ತಿದ್ದ, ನೂರಾರು ಅಡಿಕೆ ಗಿಡಗಳನ್ನು ಕಡಿದು ನೆಲಸಮವಾಗಿಸಿದ್ದಾರೆ.

RELATED ARTICLES  ಕುಮಟಾ : ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿ.

ಸೋಮವಾರ ಎಂದಿನಂತೆ ಬಾಲಕೃಷ್ಣ ಶಾನಭಾಗ ಬೆಳಿಗ್ಗೆ ಬಂದು ತೋಟ ನೋಡಿದಾಗ ಅವರಿಗೆ ವಿಷಯ ಗಮನಕ್ಕೆ ಬಂದಿದೆ. ಕಿಡಿಗೇಡಿಗಳು ಅಲ್ಲಿದ್ದ 200 ಕ್ಕೂ ಅಧಿಕ ಅಡಿಕೆ ಗಿಡಿಗಳು ಕಡಿದಿರುವುದನ್ನ ಕಂಡು ಅವರು ಶಾಕ್ ಆಗಿದ್ದಾರೆ. ಬಾಲಕೃಷ್ಣ ಅವರ ಮಗ ಸಂಜಯ ಶಾನಭಾಗ ಅವರು ಪರ ಊರಿಗೆ ಹೋಗಿರುವ ಸಂದರ್ಭದಲ್ಲಿ ಕಿಡಿಗೇಡಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

RELATED ARTICLES  ಮನೆ ಮನೆಗೆ ಪೈಪ್ ಲೈನ್ ಮೂಲಕ ಅಡಿಗೆ ಅನಿಲ

ಘಟನೆ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳಿಗೆ, ಗ್ರಾ.ಪಂ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.