ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಸಹಯೋಗದಲ್ಲಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ರಕ್ತದಾನ ಶಿಬಿರವನ್ನು ಉತ್ತರ ಕನ್ನಡ ಬ್ಲಡ್ ಬ್ಯಾಂಕ್‌ನಲ್ಲಿ ಏರ್ಪಡಿಸಲಾಗಿತ್ತು. ೨೦ ವಿದ್ಯಾರ್ಥಿಗಳು ಈ ಪುಣ್ಯಕಾರ್ಯದಲ್ಲಿ ಭಾಗಿಯಾಗಿದ್ದರು. 

ಕಾಲೇಜಿನ ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ, ರೋಟರಿ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಗಜು, ಕಾರ್ಯದರ್ಶಿ ರಾಮದಾಸ ಗುನಗಿ ಹಾಗೂ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ನಮೃತಾ ಶಾನಭಾಗ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಬಿರಾರ್ಥಿಗಳಿಗೆ ಮಾರ್ಗದರ್ಶನಗೈದರಲ್ಲದೇ, ಹೊಸದಾಗಿ ಉದ್ಘಾಟನೆಗೊಂಡ ರಕ್ತ ವಿದಳನ ಘಟಕದಿಂದ ರಕ್ತದ ಘಟಕಗಳನ್ನು (ಕೆಂಪು ರಕ್ತಕಣ, ಪ್ಲಾಟಿಲೇಟ್ಸ್ ಮತ್ತು ಪ್ಲಾಸ್ಮಾ) ಬೇರ್ಪಡಿಸುವ ತಂತ್ರಜ್ಞಾನವನ್ನು ಪ್ರಯೋಗಿಸಲಾಯಿತು. ಡಾ. ನಮೃತಾ ಇಂದಿನಿಂದ ಸಾರ್ವಜನಿಕರು ಈ ಪ್ರಯೋಜನ ಪಡೆಯಬಹುದೆಂದು ತಿಳಿಸಿದರು. ಬ್ಲಡ್ ಬ್ಯಾಂಕ್ ಉದ್ಯೋಗಿಗಳಾದ ಬಾಲಕೃಷ್ಣ ಗಾವಡಿ, ಸರಳಾ ಗೋನ್ಸಾಲ್ವೇಸ್, ಮಮತಾ ಮೇಸ್ತ  ಮೊದಲಾದವರು ಸಹಕರಿಸಿದರು. 

RELATED ARTICLES  ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಅವಘಡ