ಶಿರಸಿ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಸಮಯದಲ್ಲಿ ಚಾಲಕ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಚಾಲನೆಯಿಂದ ಅಪಘಾತ ಪಡಿಸಿ ಇಬ್ಬರಿಗೆ ಗಂಭೀರವಾಗಿ ಗಾಯ ಗೊಂಡ ಘಟನೆ ತಾಲೂಕಿನ ಹಾನಗಲ್ ರಸ್ತೆಯ ಬುಗಡಿಕೊಪ್ಪ ಬಳಿ ನಡೆದಿದೆ. ಬನವಾಸಿ ಪೊಲೀಸರು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹಾವೇರಿ ಗಾಂಧಿಪುರದ ಮಾಬುಲಿ ದಾವಲ್ ಸಾಬ್ 20 ವರ್ಷ ಹಾಗೂ ಮಹಬೂಬ್ ಅಲಿ 23 ವರ್ಷ ಎಂಬುವರೇ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.ಇಬ್ಬರು ಪಿಕಪ್ ವಾಹನದಲ್ಲಿ 7 ಕ್ಕೂ ಹೆಚ್ಚು ದನಗಳನ್ನು ಅಕ್ರಮವಾಗಿ ಹಾನಗಲ್ ನಿಂದ ಹಿಂಸಾತ್ಮಕವಾಗಿ
ಸಾಗಿಸುತ್ತಿದ್ದಾಗ ಅತಿವೇಗದಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ಬುಗಡಿಕೊಪ್ಪದ ಬೀಜ್ ಒಂದಕ್ಕೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡು ವಾಹನದಲ್ಲಿ
ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಶಿರಸಿಅಗ್ನಿಶಾಮಕ ದಳದ ಸಿಬ್ಬಂದಿಗಳು ಸುಮಾರು 55 ನಿಮಿಷಗಳ ಕಾರ್ಯಾಚರಣೆ ನಡೆಸಿ ಇಬ್ಬರ ಜೀವ ಮತ್ತು ಆರು ದನಗಳನ್ನು ರಕ್ಷಿಸಿದ್ದಾರೆ.
ಈ ಕುರಿತಾಗಿ ಯಾರು ದೂರು ಕೊಡದ
ಹಿನ್ನೆಲೆಯಲ್ಲಿ ಬನವಾಸಿ ಪೊಲೀಸರು ಸ್ವಯಂ ದೂರನ್ನು ದಾಖಲಿಸಿಕೊಂಡಿದ್ದು, ಪಿ.ಎಸ್.ಐ. ಚಂದ್ರಕಲಾ ಪತ್ತಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಗಳನ್ನು ಹಾನಗಲ್ ಆಸ್ಪತ್ರೆಗೆ
ದಾಖಲಿಸಲಾಗಿದೆ.