ಕುಮಟಾ : ತಾಲೂಕಿನ ಮಾನೀರ ಸಮೀಪ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ಇಂದು ಮದ್ಯಾನ್ಹ ಸಂಭವಿಸಿದೆ. ಅಂಕೋಲಾ ಕಡೆಯಿಂದ ಕುಮಟಾ ಮಾರ್ಗವಾಗಿ ಬರುವಾಗ ಮಾನೀರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿ ಬ್ರಿಜ್ ನ ಕೆಳಗಡೆ ಬಿದ್ದಿದ್ದು ಕ್ಲೀನರ್ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES  ಜಿಲ್ಲೆ ಶಾಸಕರಿಂದ ಸದನದಲ್ಲಿ ಮಲ್ಟಿಸ್ಪೆಷಾಲಿಟಿ ವಿಷಯ ಪ್ರಸ್ತಾಪ: ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹೆಬ್ಬಾರ್, ಭೀಮಣ್ಣ, ಸೈಲ್‌, ದಿನಕರ್ ಶೆಟ್ಟಿ , ಚಲುವಾದಿ ನಾರಾಯಣ ಸ್ವಾಮಿ ಭೇಟಿ : ಹೋರಾಟದಲ್ಲಿ ಗೆದ್ದ ಅನಂತಮೂರ್ತಿ


ಗಣೇಶ ಮತ್ತು ಚಂದು ಲಾರಿಯಲ್ಲಿ ಸಿಲುಕಿಕೊಂಡಿದ್ದು ಸ್ಥಳಿಯರ ಸಹಾಯದಿಂದ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಶಿವು ಗೌಡ ಎಂದು ಹೇಳಲಾಗಿದ್ದು, ಹರಕಡೆ ಮೂಲದವನು ಎನ್ನಲಾಗಿದೆ.ಬೈಕ್ ಸವಾರನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದುಬರಬೇಕಿದೆ.

RELATED ARTICLES  ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು.