ಭಟ್ಕಳ :ಅಂಜುಮನ್ ತಾಂತ್ರಿಕ ವಿಶ್ವವಿದ್ಯಾಲಯದ ಕನ್ನಡ ವೇದಿಕೆಯಿಂದ “ಯೋಧ-೨೦೧೭” ಉದ್ಘಾಟನಾ ಸಮಾರಂಭ ಇಂದು ಕಾಲೇಜಿನ ಆವಾರದಲ್ಲಿ ನಡೆಯಿತು.

ಪ್ರತೀ ವರ್ಷ ಕಾಲೇಜಿನಲ್ಲಿ ಕನ್ನಡ ವೇದಿಕೆಯನ್ನು ಸ್ಥಾಪಿಸಲಾಗುತ್ತಿತ್ತು. ಈ ವರ್ಷ ಅಂತಿಮ ವರ್ಷದ ವಿದ್ಯಾರ್ಥಿಗಳು ಸೇರಿ ಕನ್ನಡ ವೇದಿಕೆಯನ್ನು ಭಾರತೀಯ ಯೋಧರಿಗೆ ಗೌರವ ಸೂಚಕವಾಗಿ “ಯೋಧ ೨೦೧೭” ಎಂಬುದಾಗಿ ಸಂಯೋಜಿಸುತ್ತಿದ್ದಾರೆ.

RELATED ARTICLES  ಮೀಟ್ ರೆಕಾರ್ಡ ಸಾಧನೆ ಮಾಡಿದ ಯಶಸ್

ವಿಶೇಷ ಪರಿಕಲ್ಪನೆಯಲ್ಲಿ ಮೂಡಿ ಬರಲಿರುವ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿ ಇಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ವಿದ್ಯಾರ್ಥಿಗಳು ಸತ್ವಾಧಾರ ನ್ಯೂಸ್ ಗೆ ತಿಳಿಸಿದ್ದಾರೆ.

ಯೋಧರ ಬಗ್ಗೆ ಉತ್ತರ ಕನ್ನಡದಲ್ಲಿ ಇದೇ ಪ್ರಥಮವಾಗಿ ಈ ರೀತಿ ಕಾರ್ಯಗಳು ನಡೆಯಲಿವೆ ಎಂದು ಕನ್ನಡ ವೇದಿಕೆಯ ಸದಸ್ಯರು ತಿಳಿಸಿದ್ದಾರೆ.

RELATED ARTICLES  ಬಾಡದ ಗುಡೇಅಂಗಡಿಯ ಗ್ರಾಮಸ್ಥರಿಂದ ಸ್ಮಶಾನ ಭೂಮಿ ಸ್ವಚ್ಚತೆ

ಇದೆಲ್ಲ ಕಾರ್ಯಕ್ರಮದ ಉದ್ಘಾಟನೆ ಇಂದು ನೆರವೇರಿತು. ಶ್ರೀ ಗಂಗಾಧರ ನಾಯ್ಕ ಕಾರ್ಯಕ್ರಮದಲ್ಲಿ ಹಾಜರಿದ್ದು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು. ಹಾಗೂ ಯೋಧರಿಗೆ ಈ ಮಟ್ಟಿಗೆ ಗೌರವ ಸಲ್ಲಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

IMG 20171012 WA0019
ವಿದ್ಯಾರ್ಥಿ ಪ್ರತಿನಿಧಿಗಳಾಗಿ ಸೂರಜ್ , ದೀಕ್ಷಿತ್ , ದೇವಾನಂದ, ದೀಪಕ್ ಇನ್ನಿತರರು ಇದ್ದರು.