ಕಾರವಾರ: ಶ್ರೀ ವಿನಾಯಕ ದೇವಾಲಯ ಇಡುಗುಂಜಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ,/ಮುಖ್ಯ ಲೆಕ್ಕಿಗ 1, ಮೇಲ್ವಿಚಾರಕ 1, ಗುಮಾಸ್ತ 2, ಸ್ವಚ್ಚತೆಗಾರ 3, ಒಟ್ಟು 7 ಹುದ್ದೆಗಳನ್ನು ಮಾಸಿಕ ಗೌರವಧನದ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ಕಾರ್ಯನಿರ್ವಾಹಕ / ಮುಖ್ಯ ಲೆಕ್ಕಿಗ ಹುದ್ದೆಗೆ ಬಿ.ಕಾಂ, ಪದವಿ, ಟ್ಯಾಲಿ ಮತ್ತು ಕಂಪ್ಯೂಟರ ಡಾಟಾ ಎಂಟ್ರಿ ತರಬೇತಿ ಹೊಂದಿರಬೇಕು, ಮೇಲ್ವಿಚಾರಕ ಮತ್ತು ಗುಮಾಸ್ತ ಹುದ್ದೆಗಳಿಗೆ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು, ಸ್ವಚ್ಛತೆಗಾರ ಹುದ್ದೆಗೆ 8 ನೇ ತರಗತಿ ಪಾಸಾಗಿರಬೇಕು. ಎಲ್ಲಾ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18 ಮತ್ತು ಗರಿಷ್ಠ 40 ವರ್ಷದೊಳಗಿರಬೇಕು.

RELATED ARTICLES  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಆಸಕ್ತ ಅರ್ಜಿ ಸಲ್ಲಿಸಲು ಬಯಸುವವರು ಅಂದವಾದ ಕೈ ಬರಹದಲ್ಲಿ ಅಥವಾ ಟೈಪ್ ಮಾಡಿದ ಅರ್ಜಿಯನ್ನು ಬಯೋ-ಡೇಟಾ, ಮೋಬೈಲ್ ಸಂಖ್ಯೆ, ಅಂಕಪಟ್ಟಿ, ಮತ್ತಿತರ ದಾಖಲಾತಿಗಳ ದೃಢೀಕೃತ ಪ್ರತಿಗಳು ಮತ್ತು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ (ಒಂದನ್ನು ಅರ್ಜಿಯ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಅಂಟಿಸಿ) ಅಕ್ಟೋಬರ್ 21 ಸಂಜೆ 5:30 ಗಂಟೆಯೊಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಇಲ್ಲಿಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕು. ಅಕ್ಟೋಬರ್ 29 ರಂದು ಬೆಳಗ್ಗೆ 10 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

RELATED ARTICLES  ಚೆನ್ನಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭ ಜುಲೈ 17 ಕ್ಕೆ

ಸಂದರ್ಶನಕ್ಕೆ ಪ್ರತ್ಯೇಕವಾಗಿ ನೋಟಿಸು ಅಥವಾ ಪತ್ರವನ್ನು ಕಳುಹಿಸಲಾಗುವುದಿಲ್ಲ. ಅನಿವಾರ್ಯ ಕಾರಣಗಳಿಂದ ಸಂದರ್ಶದ ದಿನಾಂಕವನ್ನು ರದ್ದುಗೊಳಿಸಿದರೆ /ಮುಂದೂಡಿದರೆ ಅದರ ಸೂಚನೆಯನ್ನು ಜಿಲ್ಲಾ ನ್ಯಾಯಾಲಯದ ಸೂಚನ ಫಲಕದಲ್ಲಿ ಮತ್ತು ಶ್ರೀ ವಿನಾಯಕ ದೇವಾಲಯ ಇಡಗುಂಜಿ ದೇವಸ್ಥಾನದ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು ಎಂದು ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.