ಕುಮಟಾ : ತಾಲೂಕಿನ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಅಲ್ಮೆರಾ ಲಾಕರ್ ಮುರಿದು ಬರೋಬ್ಬರಿ 2 ಲಕ್ಷ 16 ಸಾವಿರ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ತಡರಾತ್ರಿ ಈ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ, ಕಾರವಾರದಿಂದ ಬೆರಳಚ್ಚು ತಜ್ಙರು ಆಗಮಿಸಿದ್ದು ಪರೀಶೀಲನೆ ನಡೆಸಿದ್ದಾರೆ. ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಬಂದು ಶಾಲೆಯ ಬೀಗ ತೆಗೆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆದರೆ ಕಾಲೇಜಿನ ಪ್ರವೇಶದ್ವಾರದ ಬೀಗ ಹಾಕಿಯೇ ಇದ್ದು, ಖಧೀಮರು ಹೇಗೆ ಒಳಬಂದರೆಂಬುದೇ ಯಕ್ಷ ಪ್ರಶ್ನೆಯಾಗಿದೆ.