ಕುಮಟಾ : ತಾಲೂಕಿನ ಹೆಗಡೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆಯುಷ್ಮಾನ್ ಭವ ಆರೋಗ್ಯ ಸೇವೆಯ ಅಭಿಯಾನದ ಮೂರನೇ ಕೊನೆಯ ಹಂತದ ಆರೋಗ್ಯ ಮಾಹಿತಿ ಕಾರ್ಯಾಗಾರ ಮಂಗಳವಾರ ನಡೆಯಿತು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿಗಳಾದ ಶೀಲಾ ಪಟಗಾರ ಹಾಗೂ ಶಿಲ್ಪಾ ಹರಿಕಾಂತ ವಿವರವಾಗಿ ಜನತೆಗೆ ತಿಳಿಸಿದರು. ಈಗಾಗಲೇ ಅಭಿಯಾನ ಪ್ರಾರಂಭ ಆದ ನಂತರ ಮೂರು ಹಂತದ ಕಾರ್ಯಕ್ರಮ ನಡೆದಿದೆ. ಮೊದಲನೇಯದು ಗರ್ಭಿಣಿ ಯರ ಆರೋಗ್ಯ ತಪಾಸಣೆ, ಎರಡನೇಯದು ಸಾಂಕ್ರಾಮಿಕ ಅಸಾಂಕ್ರಾಮಿಕ ರೋಗ ಹಾಗೂ ತಡೆಗಟ್ಟುವಿಕೆ ಬಗ್ಗೆ ಮಾಹಿತಿ, ಮೂರನೇ ಕೊನೆಯದಾಗಿ ಅಂಗಾಗ ದಾನಗಳ ಬಗ್ಗೆ ಮಾಹಿತಿ ಬಗ್ಗೆ ಮಾಹಿತಿ ನೀಡಿ ರಕ್ತದ ಒತ್ತಡ, ಸಕ್ಕರೆ ಖಾಯಿಲೆಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯರಾದ ವಿನೋದ ಪ್ರಭು ಮಾತನಾಡಿ ನಾವು ಸತ್ತ ಮೇಲೆ ನಮ್ಮ ಅಂಗಾಂಗ ದಾನ ಮಾಡುವುದರಿಂದ ಅದು ಇನ್ನೊಬ್ಬರ ಬಾಳಿಗೆ ಬೆಳಕಾಗುತ್ತದೆ. ಈಗಾಗಲೇ ನಾನು ಹಾಗೂ ನನ್ನ ಧರ್ಮ ಪತ್ನಿ ಕಣ್ಣಿನ ದಾನ ಪತ್ರಕ್ಕೆ ಸಹಿ ಮಾಡಿದೇವೆ. ಸಮಾಜದಲ್ಲಿ ಎಲ್ಲರೂ ಕೂಡ ತಮ್ಮ ಅಂಗಾಗ ದಾನದ ಬಗ್ಗೆ ಮುಂದೆ ಬರಬೇಕು ಎಂದು ವಿನಂತಿಸಿದರು.
ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಟಗಾರ ಮೋದಿಯವರ ಮಹತ್ವಾಕಾಂಕ್ಷೆ ಈ ಆಯುಷ್ಮಾನ್ ಯೋಜನೆ ಬಹಳ ಪ್ರಮುಖ ಪಾತ್ರ ವಹಿಸಿದೆ. ಈ ಆಯುಷ್ಮಾನ್ ಭವ ಕಾರ್ಯಕ್ರಮ ಬಹಳ ವಿಶಿಷ್ಟವಾಗಿ ನಡೆಸಲಾಗಿದೆ ಇದರಿಂದ ಗ್ರಾಮೀಣ ಭಾಗದ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಹೆಗಡೆ ಗ್ರಾ ಪಂ ವ್ಯಾಪ್ತಿಯ ಎಲ್ಲ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು