ಹೊನ್ನಾವರ : ಇಲ್ಲಿನ ಬಾರ್ – ರೆಸ್ಟೋರೆಂಟ್‍ನಲ್ಲಿ ಅಡುಗೆ ಕೆಲಸಮಾಡಿಕೊಂಡಿದ್ದ ಕಾರ್ಮಿಕನೋರ್ವ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರೆಸ್ಟೋರೆಂಟ್ ಮೇಲ್ಛಾವಣಿಯ ಪಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಶ್ಚಿಮಬಂಗಾಲ ಮೇದನಿಪುರ ಮೂಲದ ಗೌರಿಶಂಕರ ಬೀರೇಂದ್ರನಾಥ ರಾಯ್ (51) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಎಂದಿನಂತೆ ರೆಸ್ಟೋರೆಂಟ್‍ನಲ್ಲಿ ಅಡುಗೆ ಕೆಲಸಮಾಡಿಕೊಂಡು ಇದ್ದವನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಸೆ. 26 ಮಂಗಳವಾರದಂದು ರಾತ್ರಿ ಹೊನ್ನಾವರ ರಾಮತೀರ್ಥ ಕ್ವಾಲಿಟಿ ಬಾರ್ ರೆಸ್ಟೋರೆಂಟ್‍ನ ಕೆಲಸಗಾರರು ವಾಸವಿರುವ ಮನೆಯ ಮೇಲ್ಟಾವಣಿಯ ಪಕಾಸಿಗೆ ನೈಲಾನ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಈ ಬಗ್ಗೆ ಕ್ವಾಲಿಟಿ ಬಾರ್ ರೆಸ್ಟೋರೆಂಟ್‍ನ ಮ್ಯಾನೇಜರ್ ಗುಂಡಿಬೈಲ್ ಚಿಕ್ಕನಕೋಡದ ದಯಾನಂದ ಹನುಮಂತ ನಾಯ್ಕ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.