ಕುಮಟಾ : ಅನಂತ ಚತುರ್ದಶಿಯ ನಿಮಿತ್ತ ಪಟ್ಟಣದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ತಮ್ಮ ತಮ್ಮ ಮನದಿಂಗಿತವನ್ನು ಪ್ರಾರ್ಥಿಸಿಕೊಂಡು, ದೇವರಿಗೆ ಹರಕೆ ಪೂಜೆ ಸೇವೆ ಸಮರ್ಪಿಸಿದರು. ಪಟ್ಟಣದ ವೆಂಕಟರಮಣ ದೇವಾಲಯದ ಅಲಂಕಾರ ಎಲ್ಲರ ಗಮನ ಸೆಳೆಯಿತು. ಇನ್ನುಳಿದಂತೆ ಮಹಾಲಸಾ ನಾರಾಯಣಿ ದೇವಾಲಯ, ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

RELATED ARTICLES  ಪ ಪೂ ಶ್ರೀ ಶ್ರೀ ಜಯದೇವ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ

ದೇವಾಲಯಗಳಲ್ಲಿ ಹಣ್ಣು ಕಾಯಿ ಸೇವೆ, ಬಾಳೆಗೊನೆ ಸೇವೆ ಹಾಗೂ ಇನ್ನಿತರ ಸೇವಾ ಕಾರ್ಯಗಳು ನಡೆದವು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು. ಕುಮಟಾದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಈ ಹಿಂದಿನಿಂದಲೂ ಬಹು ವಿಶೇಷವಾಗಿ ಅನಂತ ಚತುರ್ದಶಿ ಆಚರಣೆ ಮಾಡಿಕೊಂಡು ಬಂದಿರುವುದು ವಿಶೇಷ. ಇವರ ಜೊತೆಗೆ ಇನ್ನುಳಿದ ಸಮಾಜದ ಅನೇಕರು ತಮ್ಮ ತಮ್ಮ ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆ ಪುನಸ್ಕಾರ ನೆರವೇರಿಸಿದರು. 

RELATED ARTICLES  ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದರು.