ಉಡುಪಿ : ಕರ್ನಾಟಕ ಸರ್ಕಾರ, ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕ ಕಂಪನಿಯ ಮೀನಿನ ಉತ್ಪನ್ನಗಳ ವ್ಯಾಪಾರ ಮಳಿಗೆ ಮತ್ತು ಉತ್ಪಾದ ಘಟಕವು ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ಸಂಕೀರ್ಣದ ನೆಲ ಮಹಡಿಯಲ್ಲಿ ಶುಭಾರಂಭಗೊಂಡಿತು. ಶಾಸಕ ಯಶಪಾಲ ಸುವರ್ಣ ದೀಪವನ್ನು ಬೆಳಗಿ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಹಿಳೆಯರಿಂದಲೇ ಪ್ರಾರಂಭವಾಗಿರುವ ಮಲ್ಪೆ ಮೀನಿಗಾರರ ಉತ್ಪಾದಕ ಕಂಪನಿಯಿಂದ ವೈವೀದ್ಯಮಯ ಮೀನಿನ ಉತ್ಪನ್ನಗಳಾದ ಮೀನಿನ ಉಪ್ಪಿನಕಾಯಿ, ಫ್ರಾನ್ಸ ಉಪ್ಪಿನಕಾಯಿ, ಮೀನಿನ ಫ್ರೈ ಮಸಾಲೆ ಮುಂತಾದ ವೈವೀದ್ಯಮಯ ಉತ್ಪನ್ನಗಳನ್ನು ತಯಾರಿಸಿ ಬಿಡುಗಡೆಗೊಳಿಸುತ್ತಿರುವುದು ಸಂತಸದ ಸಂಗತಿ. ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಎಲ್ಲಾ ಉತ್ಪನ್ನಗಳು ಅತ್ಯಂತ ಶುಚಿ – ರುಚಿಯಾಗಿ ತಯಾರಾಗಿದ್ದು, ಮಲ್ಪೆಯ ಮೀನುಗಾರ ಮಹಿಳೆಯರು ತಯಾರಿಸಿದ್ದಾಗಿದೆ. ಈ ಎಲ್ಲಾ ಉತ್ಪನ್ನಗಳು ಈಗಾಗಲೇ ದೇಶದಾದ್ಯಂತ ನಡೆದ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.

RELATED ARTICLES  ಮಹಾವಿಷ್ಣುವಿಗೆ ಸಂಗೀತ ದೀಪಾರಾಧನೆ.


ಕಂಪನಿಯಿಂದ ಗುಣಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಸಿಗುವಂತಾಗಲಿ, ಹಾಗೆಯೇ ಕಂಪನಿಯೂ ಬೆಳೆದು ಮೀನುಗಾರರ ಆದಾಯವೂ ಹೆಚ್ಚುವಂತಾಗಲಿ ಈ ಕಂಪನಿಯ ಹೊಸ ವ್ಯಾಪಾರ ಮಳಿಗೆ ಮತ್ತು ಉತ್ಪಾದನಾ ಘಟಕವು ಅತ್ಯಂತ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು. ಕಂಪನಿಯಲ್ಲಿ ವಿವಿಧ ಬಗೆಯ ಮೀನಿನ ಉಪ್ಪಿನಕಾಯಿ, ಮೀನಿನ ಮಸಾಲೆ, ಒಣ ಮೀನಿನ ಚಟ್ನಿ, ವಿವಿಧ ಬಗೆಯ ಒಣ ಮೀನುಗಳು, ರೆಡಿ ಟು ಫ್ರೈ ಮೀನುಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮೀನಿನ ಉತ್ಪನ್ನಗಳು ಲಭ್ಯವಿದೆ.

RELATED ARTICLES  ಸ್ವಚ್ಚತೆಗಾಗಿ ಸೇವೆ ಮಾಡಿದ ಪಹರೆ ವೇದಿಕೆಗೆ ಸಂದಿತು ಮುರುಘಾ ದಸರಾ ಪ್ರಶಸ್ತಿ.


ಈ ಸಂದರ್ಭದಲ್ಲಿ ಕಂಪನಿಯ ಅಧ್ಯಕ್ಷರಾದ ವನಜ ಪುತ್ರನ್, ನಿರ್ದೇಶಕರಾದ ಜಯಂತಿ ಸಾಲಿಯಾನ್, ಜಯಂತಿ ಮೈಂದನ್, ಪದ್ಮಾವತಿ ಕಿರಣ್, ನಿರ್ಮಲ ಸುರೇಶ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ವಿಷ್ಣುಪ್ರಸಾದ್ ಕೆ ಕಾಮತ್, ಡಿಇಓ ಧನುಷಾ ಉಪಸ್ಥಿತರಿದ್ದರು.