ಕುಮಟಾ : ತಾಲೂಕಿನ ಮಿರ್ಜಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿ ಬಿದ್ದಿದ್ದ ಜಾನುವಾರು ಒಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಗೊಂಡು ಕಾರನಲ್ಲಿದ್ದವರು ಗಾಯಗೊಂಡ ಘಟನೆ
ನಡೆದಿದೆ. ಮಿರ್ಜಾನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪರಿಚಿತ ವಾಹನವೊಂದು ಹೆದ್ದಾರಿಯಲ್ಲಿದ್ದ ಜಾನುವಾರು ಒಂದಕ್ಕೆ ಡಿಕ್ಕಿ ಹೊಡೆದು ಜಾನುವಾರು ಹೆದ್ದಾರಿಯಲ್ಲಿ ಮೃತಪಟ್ಟು ಬಿದ್ದಿತ್ತು.

RELATED ARTICLES  ಗಾಯಕಿ ಲತಾ ಮಂಗೇಶ್ಕರ್ ನಿಧನ

ಅದೇ ವೇಳೆ ಅಂಕೋಲಾ ಕಡೆಯಿಂದ ಕುಮಟಾ
ಕಡೆ ಚಲಿಸುತ್ತಿದ್ದ ಕಾರು ಚಾಲಕ ಹೆದ್ದಾರಿಯಲ್ಲಿ
ಮೃತಪಟ್ಟು ಬಿದ್ದದ್ದ ಜಾನುವಾರುವನ್ನು
ಗಮನಿಸದೆ ಆ ಜಾನುವಾರಿಗೆ ಡಿಕ್ಕಿ
ಹೊಡೆದಿದ್ದಾನೆ. ಇದರಿಂದಾಗಿ ಕಾರನಲ್ಲಿದ್ದ ಓರ್ವನಿಗೆ ಗಾಯವಾಗಿದ್ದು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

RELATED ARTICLES  ಯಲಕೊಟ್ಟಿಗೆ ಶಾಲೆಯಲ್ಲಿ ಕೊಡುಗೆ ಸ್ವೀಕಾರ ಕಾರ್ಯಕ್ರಮ