ಕುಮಟಾ : ಕುಮಟಾ ಶಿರಸಿ ರಸ್ತೆಯ ತಾಲೂಕಿನ ದೇವಿಮನೆ ಘಟ್ಟದ ಮಾಸ್ತಿಮನೆಯ ಶ್ರೀ ಕ್ಷೇತ್ರಪಾಳ ದೇವಸ್ಥಾನದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ದೇವಸ್ಥಾನಕ್ಕೆ ಬಂದ ಶಿರಸಿಯ ನಾಗರಾಜ ಗೋಪಾಲ ಕಿಮಾನಿಕರ ದೇವರ ದರ್ಶನ ಪಡೆದು ಅಂಗಡಿಗೆ ಬರುತ್ತಿರುವಾಗ ದೇವಸ್ಥಾನದ ಹಿಂಬಾಗದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಕಂಡು ತಕ್ಷಣ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

RELATED ARTICLES  ಭಟ್ಕಳ : ಕತ್ತಿಯಿಂದ ಕಡಿದು ನಾಲ್ವರ ಕೊಲೆ

ಮೃತ ವ್ಯಕ್ತಿಯು ಬಿಳಿ ಬಣ್ಣದ ಜುಬ್ಬಾ, ಕಪ್ಪು, ನೀಲಿ ಬಣ್ಣದ ಗೇರೆ ಇರುವ ಲುಂಗಿ ತೊಟ್ಟಿರುವ ಈ ವ್ಯಕ್ತಿಯ ಬಲ ಹುಬ್ಬಿನ ಹತ್ತಿರ ತೆರಚಿದ ಗಾಯವಾಗಿದ್ದು, ಎಡಕಿವಿಯ ಹಿಂಬದಿಯ ತಲೆಗೆ ಗಾಯವಾಗಿ ರಕ್ತ ಸೋರುತ್ತಿದೆ.

RELATED ARTICLES  ಮನೆಯಿಂದ ಹೊರಗೆ ಹೋದ ಗೃಹಿಣಿ ನಾಪತ್ತೆ.

ಮೃತ ವ್ಯಕ್ತಿಯ ತಲೆ ಬಾಗಕ್ಕೆ ಗಂಭೀರ ಗಾಯಗೊಂಡಿರುವುದರಿಂದ ಯಾರೋ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಇಲ್ಲಿ ಎಸೆದು ಹೋಗಿರಬಹುದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿನೀಡಿದ್ದಾರೆ.