ಕುಮಟಾ: ಇಲ್ಲಿಯ ನೆಹರೂನಗರ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಶುಚಿತ್ವ ಆಹಾರ ಪೋಷಣೆ ಮತ್ತು ಆರೋಗ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಿದರಲ್ಲದೇ ಗಾಂಧಿ ಹಾಗೂ ಶಾಸ್ತ್ರಿ ಜಯಂತಿಯನ್ನು ವಿದ್ಯುಕ್ತವಾಗಿ ಆಚರಿಸಿದರು. ಮುಖ್ಯ ಶಿಕ್ಷಕಿ ಹಾಗೂ ಏನ್ಸ್ ಕ್ಲಬ್ ಕಾರ್ಯದರ್ಶಿ ಶೈಲಾ ಗುನಗಿ ಹಾಗೂ ಅವರ ಸಹೋದ್ಯೋಗಿಗಳು ಸಂಯೋಜಿಸಿದ ಈ ಕಾರ್ಯಕ್ರಮವನ್ನು ರೋಟರಿ ಅಧ್ಯಕ್ಷ ಎನ್.ಆರ್.ಗಜು ಹಾಗೂ ಕಾರ್ಯದರ್ಶಿ ರಾಮದಾಸ ಗುನಗಿ ಉದ್ಘಾಟಿಸಿದರು. 

RELATED ARTICLES  ಉತ್ತರ ಕನ್ನಡದಲ್ಲಿಯೂ ಏರಿದ ಕೊರೋನಾ ಪ್ರಕರಣ

‘ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿದ್ದ ವಿವಿಧ ತರಕಾರಿ ದವಸಧಾನ್ಯ ಮತ್ತು ಪೋಷಣೆಗೆ ಅವಶಕ್ಯವಾದ ಆಹಾರ ಪದಾರ್ಥಗಳನ್ನು ತಂದು ಶಿಕ್ಷಕರ ಮಾರ್ಗದರ್ಶನದಂತೆ ವಿವಿಧ ವಿನ್ಯಾಸಗಳಲ್ಲಿ ಜೋಡಿಸಿ ಪ್ರದರ್ಶನ ಮಾಡಿ ಪೋಷಣೆಗೆ ಅವಶ್ಯಕವಾದ ವಸ್ತುಗಳನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿ,  ಇದರಿಂದ ಈವರೆಗೆ ಕಂಡು ಕೇಳರಿಯದ ಪೋಷಣಾ ವಸ್ತುಗಳನ್ನು ನೋಡುವ ಭಾಗ್ಯ ವಿದ್ಯಾರ್ಥಿಗಳಿಗೆ ಲಭಿಸುವಂತಾಗಿಸುವಲ್ಲಿ ಶಾಲೆ ಶ್ರಮಿಸಿದೆಯೆಂದು ರೋಟರಿ ಅಧ್ಯಕ್ಷರು, ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇದೊಂದು ಉತ್ತಮ ಅಭಿಯಾನ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು. 

RELATED ARTICLES  ಚುನಾವಣೆ ಬಂದೋಬಸ್ತ್:ಭಟ್ಕಳದಲ್ಲಿ ಹೆಚ್ಚಿನ ಚೆಕ್ ಪೋಸ್ಟ ತೆರೆಯುವ ಸುಳಿವು ನೀಡಿದ ಸಹಾಯಕ ಆಯುಕ್ತ ಎನ್.ಸಿದ್ದೇಶ್ವರ

ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕಿ ಸೀಮಾ ಪ್ರಭು ನಿರ್ದೇಶಿಸಿದ ಮಕ್ಕಳು ಅಭಿನಯಿಸಿದ ‘ಸ್ವಚ್ಛತಾ ಅಭಿಯಾನ’ ಎಂಬ ಕಿರುನಾಟಕದ ಪ್ರದರ್ಶನ ಏರ್ಪಡಿಸಲಾಗಿತ್ತು. ಮುದ್ದು ಮಕ್ಕಳು ಗಾಂಧಿಯಾಗಿ, ಕಸ್ತೂರಬಾ ಆಗಿ, ಶಾಸ್ತ್ರಿಯಾಗಿ, ಭಾರತಾಂಬೆಯಾಗಿ, ಡಾಕ್ಟರ್ ಆಗಿ, ನರ್ಸ್ ಆಗಿ, ಪುರಸಭಾ ಕಾರ್ಯಕರ್ತರಾಗಿ ಕಂಗೊಳಿಸಿದರು. ಎಲ್ಲ ಶಿಕ್ಷಕವರ್ಗದವರು, ಪಾಲಕ ಪೋಷಕವರ್ಗದವರು ಇದ್ದು ವೀಕ್ಷಿಸಿದರು.