ಕುಮಟಾ : ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ದೇಶದಾದ್ಯಂತ ಹಲವಾರು ಸೇವಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಗಾಂಧಿಜಯಂತಿಯಂದು ಕುಮಟಾ ಮಂಡಲ ಬಿಜೆಪಿ ಕಾರ್ಯಾಲಯದಲ್ಲಿ  ಸೋಮವಾರದಿಂದ ಖಾದಿಮೇಳ ಆರಂಭವಾಗಿದ್ದು, ಶಾಸಕ ದಿನಕರ ಶೆಟ್ಟಿ ಮೇಳಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿಯಾದಿಯಾಗಿ ನೆರೆದಿದ್ದ ಹಲವು ಮುಖಂಡರು, ಕಾರ್ಯಕರ್ತರು ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಶಾಸಕರು ಮಾತನಾಡಿ, ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತೀ ವರ್ಷದಂತೆ ಈವರ್ಷವೂ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಬಿಜೆಪಿ ಕಾರ್ಯಾಲಯದಲ್ಲಿ ಖಾದಿ ಮೇಳ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಖಾದಿ ಮೇಳಕ್ಕೆ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದು, ಹೆಚ್ಚಿನ ಜನರು ಇದರ ಪ್ರಯೋಜನೆ ಪಡೆಯಬೇಕು ಎಂದರು. 

RELATED ARTICLES  ವೃದ್ದೆಗೆ ಡಿಕ್ಕಿ ಹೊಡೆದ ಲಾರಿ

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿಯ ಬಟ್ಟೆಯ ಸ್ವಂತಿಕೆಯ ರೂಪನ್ನು ಕಾಣಬಹುದು. ಖಾದಿಯು ನಮ್ಮ ಭಾರತ ಸಂಸ್ಕಂತಿಯ ಅಸ್ಮಿತೆಯ ಸಂಕೇತವಾಗಿದೆ. ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸಿನ ಹಿಂದೆ ಖಾದಿ ಅಸ್ತಿತ್ವದ ಆಸೆಯು ಅಡಗಿದೆ. ಖಾದಿ ಬಳಸುವುದು ಚಳುವಳಿ ರೂಪ ಪಡೆದ ವಿಚಾರವನ್ನು ಉಲ್ಲೇಖಿಸಿದರು.

ವಿವಿಧ ಭಾಗಗಳಿಂದ ಆಗಮಿಸಿದ ಮಾರಾಟಗಾರರು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಖಾದಿಬಟ್ಟೆ, ಸ್ವದೇಶಿ ಗೃಹಪಯೋಗಿ ವಸ್ತುಗಳು, ಮನೆಯಲ್ಲಿ ತಯಾರಿಸಿದ ಸ್ವಾದಿಷ್ಟ ಖಾದ್ಯಗಳು ಮೇಳದಲ್ಲಿ ಲಭ್ಯವಿದ್ದು ಅ ೫ ರ ವರೆಗೆ ಈ ಮೇಳ ನಡೆಯಲಿದೆ.

RELATED ARTICLES  ಅಂಗನವಾಡಿ ಕಾರ್ಯಕರ್ತೆಯ ಆತ್ಮಹತ್ಯೆ: ಆರೋಪಿಗಳ ಬಂಧನ

ಉದ್ಘಾಟನೆಯ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಹೇಮಂತಕುಮಾರ್ ಗಾಂವಕರ್, ಬಿಜೆಪಿ ಪ್ರಮುಖರಾದ ಎಂ.ಜಿ.ಭಟ್ಟ, ಡಾ.ಜಿ.ಜಿ.ಹೆಗಡೆ, ವಿನೋದ ಪ್ರಭು, ಖಾದಿ ಮೇಳದ ವ್ಯವಸ್ಥಾಪಕರಾದ ನವೀನ ನಾಯಕ ಮತ್ತು ಆದಿತ್ಯ ಶೇಟ್, ಜಿ.ಆಯ್.ಹೆಗಡೆ, ಕುಮಾರ್ ಮಾರ್ಕಾಂಡೆ, ಗಜಾನನ ಗುನಗಾ, ವಿನಾಯಕ ನಾಯ್ಕ, ಮೋಹಿನಿ ಗೌಡ, ಶಿವಾನಿ ಶಾಂತಾರಾಮ, ಜಿ.ಎಸ್.ಗುನಗಾ, ಗಣೇಶ ಪಂಡಿತ್, ಕುಮಾರ ಭಟ್ಟ, ಮಧುಸೂದನ ಹೆಗಡೆ, ತುಳಸು ಗೌಡ, ಸೂರ್ಯಕಾಂತ ಗೌಡ, ಪಿ.ಎಂ.ನಾಯ್ಕ, ಮಂಜು ಮುಕ್ರಿ, ವಿಶ್ವನಾಥ ನಾಯ್ಕ, ಮಹೇಶ ನಾಯಕ, ಜಯಾ ಶೇಟ್, ಜಗದೀಶ ಭಟ್ಟ, ಗೀತಾ ಮುಕ್ರಿ, ಶೈಲಾ ಗೌಡ, ಅನುರಾಧ ಭಟ್ಟ ಹಾಗೂ ಇತರರು ಇದ್ದರು.