ಕುಮಟಾ : ಮದ್ಯಪಾನದಿಂದ ಮನುಷ್ಯನ ಕೌಟುಂಬಿಕ ಜೀವನಮಾತ್ರ ಕೆಡುವುದಿಲ್ಲ, ಅದರಿಂದ ಸಂಪೂರ್ಣ ಸಮಾಜದಮೇಲೆ ಹಲವು ರೀತಿಯ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಸಮಾಜದ ಬೆಳವಣಿಗೆಯಲ್ಲಿ ಸಹಕಾರ ನೀಡುವ ದಿಶೆಯಲ್ಲಿ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಮದ್ಯವರ್ಜನ ಶಿಬಿರಗಳಂತಹ ಅನೇಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಗಾಂಧಿಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಕುಮಟಾದ ರೋಟರಿ ಕ್ಲಬ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು‌. 

RELATED ARTICLES  ಓದುವ ಆನಂದ ದಕ್ಕಿಸಿಕೊಳ್ಳಿ -ಎಂ.ಎಂ.ಹೆಗಡೆ

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ತಮ್ಮ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವುಗಳಲ್ಲಿ ದುಶ್ಚಟಗಳ ವರ್ಜನ ಶಿಬಿರವು ಬಹಳ ಮುಖ್ಯವಾದದ್ದು. ಗಾಂಧೀಜಿಯವರು ಮದ್ಯಪಾನ ಮುಕ್ತ ಸಮಾಜವನ್ನು ಕಟ್ಟುವ ಕನಸನ್ನು ಕಂಡಿದ್ದರು. ಆ ಮಹಾತ್ಮರ ಜನ್ಮದಿನದ ಅಂಗವಾಗಿ ಇಂತಹ ಕಾರ್ಯಕ್ರಮವನ್ನು ನೀವು ಹಮ್ಮಿಕೊಂಡಿದ್ದು ಬಹಳ ಅರ್ಥಪೂರ್ಣವಾದದ್ದು. ಮದ್ಯಪಾನದಿಂದ ಮನುಷ್ಯನ ಕೌಟುಂಬಿಕ ಜೀವನಮಾತ್ರ ಕೆಡುವುದಿಲ್ಲ, ಅದರಿಂದ ಸಂಪೂರ್ಣ ಸಮಾಜದಮೇಲೆ ಹಲವು ರೀತಿಯ ದುಷ್ಪರಿಣಾಮ ಉಂಟಾಗುತ್ತದೆ. ವ್ಯಸನಮುಕ್ತ ಸಮಾಜ ನಿರ್ಮಾಣದ ಪರಿಕಲ್ಪನೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಹಾಗೂ ಧರ್ಮಸ್ಥಳ ಗ್ರಾಮಭಿವೃದ್ಧಿ ಟ್ರಸ್ಟ್ ಗೆ ಅನಂತಾನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

RELATED ARTICLES  ನಾಗರೀಕ ಸೇವಾ ಪರೀಕ್ಷೆಗಳ ಕುರಿತಾಗಿ ವಿಶೇಷ ಕಾರ್ಯಾಗಾರ.

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ ನಾಯ್ಕ ಮಾತನಾಡಿ ರಾಜ್ಯದಲ್ಲಿ ಮದ್ಯಪಾನ ಮುಕ್ತ ಸಮಾಜ ನಿರ್ಮಿಸುವುದೇ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ಗುರಿಯಾಗಿದೆ. ನಾವೆಲ್ಲರೂ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.

ಉಪಾಧ್ಯಕ್ಷ ವಾಸುದೇವ ನಾರಾಯಣ ನಾಯಕ, ಮಾಜಿ ಅಧ್ಯಕ್ಷ ಯೋಗಾನಂದ ಗಾಂಧಿ, ಸದಸ್ಯೆ ಮಮತಾ ನಾಯ್ಕ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಟ್ರಸ್ಟಿನ ಕುಮಟಾ ತಾಲೂಕಿನ ಯೋಜನಾಧಿಕಾರಿ ಕಲ್ಮೇಶ ಎಂ. ವೇದಿಕೆಯಲ್ಲಿ ಇದ್ದರು.