ಮುಂಡಗೋಡ : ಮುಕ್ತವಿಶ್ವವಿದ್ಯಾಲಯ ಉಳಿಸಲು ಎಬಿವಿಪಿಯಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೆಂಬಲಿಸಿ ಹಾಗೂ ಮುಕ್ತವಿಶ್ವವಿದ್ಯಾಲಯಗಳನ್ನು ಮುಚ್ಚಬಾರದು ಎಂದು ಎಬಿವಿಪಿ ಮುಂಡಗೋಡ ಘಟಕ ಗುರುವಾರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.

ಮನವಿಯಲ್ಲಿ ಕೆ.ಎಸ್.ಒ.ಯು 1996 ರಲ್ಲಿ ಸ್ವತಂತ್ರ ಅಸ್ತಿತ್ವ ಪಡೆದಿದೆ ಅದಕ್ಕೂ ಮೊದಲು ಮೈಸೂರ ವಿಶ್ವವಿದ್ಯಾನಿಯಲಯ ಭಾಗವಾಗಿ ಶಿಕ್ಷಣ ನೀಡುತ್ತಾ ಬಂದಿದೆ ಬಡತನ ಕಾರಣಗಳಿಂದ ಜಿವನ ನಿರ್ವಹಣೆಗೆ ಉದ್ಯೋಗ ಮಾಡಬೇಕದ ಅನಿವಾರ್ಯತೆಗಳಿಂದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಮನ್ಯ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಆಗದೇ ಅಂತಹವರ ಕನಸನ್ನು ನನಸು ಮಾಡುತ್ತಾ ಬಂದಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಮುಚ್ಚುವುದು ಒಂದು ನಾಗರೀಕ ರಾಜ್ಯ ಸರ್ಕಾರದ ಕೆಲಸವೇ ಮಾನ್ಯ ಉನ್ನತ ಶಿಕ್ಷಣ ಸಚಿವರು ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಳ್ಳು ನೀರು ಬೀಡದೇ ಅದನ್ನು ಉಳಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಉನ್ನತ ಶಿಕ್ಷಣ ಸಚಿವರು ನೀಡಿದ ಹೇಳಿಕೆ ಯನ್ನು ಎಬಿವಿಪಿ
ತೀವೃವಾಗಿ ಖಂಡಿಸುತ್ತದೆ ಎಂದು ಹಾಜರಿದ್ದ ಸದಸ್ಯರು ತಿಳಿಸಿದರು.

RELATED ARTICLES  ಟೆಂಪೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು.

ಪಾದಯಾತ್ರೆಯ ಪ್ರಮುಖ ಬೇಡಿಕೆಗಳು :
1) ಕೆ.ಎಸ್‍.ಒ.ಯು ವನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರಕಾರ ಕೈ ಬಿಡಬೇಕು ಹಾಗೂ ಕೆ.ಎಸ್‍.ಒ.ಯು ತೆರೆಯುವ ನೇತೃತ್ವವನ್ನು ರಾಜ್ಯ ಸರ್ಕಾರವಹಿಸಿಕೊಳ್ಳಬೇಕು.

RELATED ARTICLES  ಬಿಜೆಪಿ ಪಕ್ಷ ಸೇರಿದ ಧಾರೇಶ್ವರದ ಯುವಕರು.

2) ಈ ಹಿಂದೆ ತಪ್ಪು ಮಾಡಿದ ತಪ್ಪಿಸ್ಥರ ವಿರುದ್ದ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು.

3) ಕೆಎಸ್‍ಒಯುಗೆ ಯುಜಿಸಿ ಮಾನ್ಯತೆ ನೀಡಬೇಕು. ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ವಿಭಾಗಿಯ ಕಾರ್ಯದರ್ಶಿ ಸಿದ್ದು ಮದರಕಂಡಿ, ನಗರ ಸಹ ಕಾರ್ಯದರ್ಶಿ ಅರುಣ ವಿ. ಕಾರ್ಯಕರ್ತರಾದ ಲಕ್ಷ್ಮೀ, ಗೌರೀಶ, ವಿನೋದ, ಶರತ್ ಸೇರಿದಂತೆ ಮುಂತಾದ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.