ಕುಮಟಾ : ಕಳೆದ ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ತಾಲೂಕಾ ಪಂಚಾಯತ್ ನ ಮಾಜಿ ಸದಸ್ಯ ಈಶ್ವರ ನಾಯ್ಕ ಕೊಡ್ಕಣಿ ಸೇರಿದಂತೆ ಹಲವರು ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇವರು ಈ ಹಿಂದೆ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು. 

ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವ ಅವರ ನಿವಾಸದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಕಾಂಗ್ರೆಸ್ ಮುಖಂಡ ಭುವನ ಭಾಗ್ವತ, ನಾಗರಾಜ ಹಿತ್ತಲಮಕ್ಕಿ ಇವರ ಸಮ್ಮುಖದಲ್ಲಿ ನಿವೇದಿತ ಆಳ್ವ ಕಾಂಗ್ರೆಸ್ ಬಾವುಟ ನೀಡುವ ಮೂಲಕ ಎಲ್ಲರನ್ನೂ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

RELATED ARTICLES  ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿಯಲ್ಲಿ ಹೆಚ್ಚುವರಿ ತರಗತಿ ಕೊಠಡಿ ಲೋಕಾರ್ಪಣೆ.

ಈ ವೇಳೆ ಕೋಡ್ಕಣಿ ಗ್ರಾ.ಪಂ ಉಪಾಧ್ಯಕ್ಷ ಮುರಕುಂಡಿ ನಾಯ್ಕ, ಖಾಸಿಂ ದಾವೂದ್ ಬೆಳಿಯ, ಮಿರ್ಜಾನ ಗ್ರಾ.ಪಂ ಉಪಾಧ್ಯಕ್ಷ ನಾರಾಯಣ ನಾಯ್ಕ ಗೌರಸಗಿ, ಸದಾನಂದ ಜಾಲಿಸುತಗಿ, ಮುಸ್ಸಾ ಎ ಮೊಘಲ್, ರವಿ ಪಿ. ನಾಯ್ಕ, ಅದಮ್ ಅಹಮದ್ ಬೇಡಿಯ, ಸುಧಾಕರ ಎನ್. ನಾಯ್ಕ, ನಾಗಪ್ಪ ಟಿ. ನಾಯ್ಕ, ನವೀನ ನಾಯ್ಕ, ಆನಂದು ನಾಯ್ಕ, ತಿಮ್ಮಯ್ಯ ಪಟಗಾರ, ರೋಹಿದಾಸ ದೇಶಭಂಡಾರಿ, ವಿನಾಯಕ ಎಚ್. ನಾಯ್ಕ, ಅಬ್ದುಲ್ ರೆಹಮಾನ್, ವಿನಾಯಕ ಮಡಿವಾಳ, ಚಂದ್ರಕಾಂತ ಭಂಡಾರಿ, ವಿಘ್ನೇಶ ಗುನಗಾ, ನಾಗರಾಜ ಹಳ್ಳೆರ್, ರಾಜು ಆಯ್. ಪಟಗಾರ, ತುಕಾರಾಮ ಎನ್. ನಾಯ್ಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

RELATED ARTICLES  ಏ.1ರಿಂದ ಹೊಸ ಚೆಕ್‌ಬುಕ್ ಕಡ್ಡಾಯ : ಎಸ್. ಬಿ. ಇ.