ಕುಮಟಾ : ಶಾಸಕ ದಿನಕರ ಶೆಟ್ಟಿ ಅವರು ತಾಲೂಕಾ ಹರಿಕಂತ್ರ ಮೀನುಗಾರ ಸಮಾಜದ ಅಭಿವೃದ್ಧಿ ಒಕ್ಕೂಟ ಸಂಘದ ಸಮುದಾಯ ಭವನದ ಜಾಗ ಖರೀದಿಗೆ  ನಿಖಿಲ್ ದಿನಕರ ಶೆಟ್ಟಿ ಫೌಂಡೇಶನ್ ವತಿಯಿಂದ ಶನಿವಾರ 5ಲಕ್ಷ ರೂ. ಚೆಕ್ ನೀಡಿದರು. ಈ ಮೊದಲು ಶಾಸಕರು ಕುಮಟಾ ತಾಲೂಕಾ ಹರಿಕಂತ್ರ ಮೀನುಗಾರ ಸಮಾಜದ ಅಭಿವೃದ್ಧಿ ಒಕ್ಕೂಟಕ್ಕೆ ತಮ್ಮ ಫೌಂಡೇಶನ್ ವತಿಯಿಂದ 10ಲಕ್ಷ ರೂ. ನೀಡಿದ್ದರು.

ಕುಮಟಾ ತಾಲೂಕಾ ಹರಿಕಂತ್ರ ಮೀನುಗಾರ ಸಮಾಜದ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಜಗದೀಶ್ ಹರಿಕಂತ್ರ ಅವರು ಮಾತನಾಡಿ, ಮಾನ್ಯ ದಿನಕರ ಶೆಟ್ಟಿ ಅವರು ಮೊದಲಿನಿಂದಲೂ ನಮ್ಮ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ನಮ್ಮ ಒಕ್ಕೂಟದ ಸಭೆಗಳಲ್ಲಿ ಪಾಲ್ಗೊಂಡು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ನಮ್ಮ ಸಮಾಜಕ್ಕೊಂದು ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಬಹುವರ್ಷಗಳ ಕನಸು. ಶಾಸಕರ ಸಹಾಯದಿಂದ ಅದು ನನಸಾಗುವ ಕಾಲ ಸನ್ನಿಹಿತವಾಗಿದೆ. ಸದಾಕಾಲ ನಮ್ಮ ಸಮಾಜಕ್ಕೆ ಸಹಾಯ ಸಹಕಾರ ನೀಡುತ್ತಿರುವ ದಿನಕರ ಶೆಟ್ಟಿ ಅವರಿಗೆ ಹರಿಕಂತ್ರ ಸಮಾಜದ ಎಲ್ಲರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

RELATED ARTICLES  ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ

ಹರಿಕಂತ್ರ ಸಮಾಜದ ಪ್ರಮುಖರಾದ ಬೀರಪ್ಪ ಈರಾ ಹರಿಕಂತ್ರ, ಶಿವರಾಮ ನಾಗಪ್ಪ ಹರಿಕಂತ್ರ, ನಾಗಪ್ಪ ಶಿವಪ್ಪ ಹರಿಕಂತ್ರ, ಲಕ್ಷ್ಮಣ ನಾರಾಯಣ ಹರಿಕಂತ್ರ, ಸುರೇಶ ಪುರಸು ಹರಿಕಂತ್ರ, ಶ್ರೀಧರ ನಾರಾಯಣ ಹರಿಕಂತ್ರ, ವಾಮನ ಕನ್ನಾ ಹರಿಕಂತ್ರ, ಮಹೇಶ ಪರಮೇಶ್ವರ ಹರಿಕಂತ್ರ, ಮಹದೇವ ಸೇರುಗಾರ ಹರಿಕಂತ್ರ, ಲಕ್ಷ್ಮೀಧರ ಹರಿಕಂತ್ರ, ಈಶ್ವರ ಹರಿಕಂತ್ರ ಮತ್ತಿತರರು ಇದ್ದರು.

RELATED ARTICLES  ಸ್ವತಃ ಸತೀಶ ಸೈಲ್ ಸಹ ಬಿಜೆಪಿಗೆ ಮತ ಹಾಕಲಿದ್ದಾರೆ ಎಂಬ ಭರವಸೆ ನನಗಿದೆ : ನಾಗರಾಜ ನಾಯಕ