ಕುಮಟಾ : ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ಎಂಟು ವಿದ್ಯಾರ್ಥಿಗಳು ಇತ್ತೀಚಿಗೆ ಹಳಿಯಾಳದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಜಯಗಳಿಸಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗುವುದರೊಂದಿಗೆ ಕಾಲೇಜಿನ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 

ಗುಂಡು ಎಸೆತದಲ್ಲಿ ಗಣೇಶ ಮದನ ನಾಯಕ ಪ್ರಥಮ ಸ್ಥಾನಗಳಿಸಿ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಪ್ರಜ್ನಾ ಮೋಹನ ನಾಯಕ, ಆರ್ಜು ಐ. ಖಾನ್, ಧ್ರುವ ಸುರೇಶ, ಪ್ರೇಮ ದೇವಳಿ, ಕಾರ್ತಿಕೇಯ ಶೇಟ್ ಕರಾಟೆಯಲ್ಲಿ, ಸಿಂಚನಾ ಗೌಡ ಯೋಗದಲ್ಲಿ, ಕು. ಅನಿರುದ್ ನಾಯಕ ತ್ರೊಬಾಲ್ ನಲ್ಲಿ, ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ  ಕಾಲೇಜಿನ ಹಾಗೂ ಕುಮಟಾ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

RELATED ARTICLES  ಅಕ್ರಮ ಸಾರಾಯಿ ಸಂಗ್ರಹ : ಓರ್ವನನ್ನು ವಶಕ್ಕೆ ಪಡೆದ ಪೊಲೀಸರು.

ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲ ಕಿರಣ ಭಟ್ಟ, ಉಪಪ್ರಾಂಶುಪಾಲ ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕ ಪದ್ಮನಾಭ ಪ್ರಭು, ಅವಿನಾಶ ಅಮ್ಮನಗಿ, ತ್ರಿವೇಣಿ ನಾಯ್ಕ, ದೈಹಿಕ ಶಿಕ್ಷಕ ದಿವಾಕರ ನಾಯ್ಕ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

RELATED ARTICLES  ಹೆಂಡತಿಗೆ ಕಂಡ ಕಂಡಲ್ಲಿ ಚಾಕುವಿನಿಂದ ಇರಿದ ಪತಿ...!