ಹೊನ್ನಾವರ : ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಇಲಾಖಾ ಮಟ್ಟದ ಕ್ರೀಡಾಕೂಟದಲ್ಲಿ ಕರ್ಕಿಯ ದಯಾನಂದ ವಿದ್ಯಾಭಾರತಿ ಗುರುಕುಲದಲ್ಲಿ ಅಭ್ಯಸಿಸುತ್ತಿರುವ ಆಶ್ರಮದ ವಿದ್ಯಾರ್ಥಿ ಕುಮಾರ ತೈಶ್ವಾ ಸಾಮಯಂಗ್ ,600 ಮೀಟರ್ ಓಟ ಹಾಗೂ 80 ಮೀಟರ್ ಹರ್ಡಲ್ಸ್ ದಲ್ಲಿ ಪ್ರಥಮ ,200 ಮೀಟರ್ ನಲ್ಲಿ ದ್ವೀತಿಯ ಸ್ಥಾನ ಪಡೆದು,ಮೂರೂ ವಿಭಾಗಗಳಲ್ಲಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾನೆ‌.

RELATED ARTICLES  ಧಾರೇಶ್ವರದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ: ದಿನಕರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರೇಶ್ವರದ ಸಹಯೋಗದೊಂದಿಗೆ ಯಶಸ್ವಿಯಾಯ್ತು ಕಾರ್ಯಕ್ರಮ.

ಅವನಿಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕಿ ಶ್ರೀಮತಿ ಚಂದ್ರಕಲಾ ನಾಯ್ಕ ಹಾಗು ವಿದ್ಯಾರ್ಥಿ ಯನ್ನು , ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತೀಜೀ, ಮುಖ್ಯಾಧ್ಯಾಪಕಿ ಶ್ರೀಮತಿ ವೈಶಾಲಿ ನಾಯ್ಕ ಹಾಗು ಅಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

RELATED ARTICLES  ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಉತ್ತಮ‌ ಸಾಧನೆ .

ದಯಾ ಶಂಕರ ಗುರುಕುಲದ ವಿದ್ಯಾರ್ಥಿಗಳು ಪ್ರತಿವರ್ಷ ರಾಜ್ಯ ಸ್ತರಕ್ಕೆ ಸ್ಪರ್ಧಿಸುತ್ತಿರುವ ಬಗ್ಗೆ ಊರ ನಾಗರಿಕರು ಸಂತಸ ವ್ಯಕ್ತಪಡಿಸಿರುತ್ತಾರೆ .