ಕುಮಟಾ : ಹೆಂಡತಿಯ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗಬಹುದೆಂಬ ಕಾರಣದಿಂದ ಗಂಡನನ್ನೇ ಕೊಲೆ‌ಮಾಡಿಸಿದ ಘಟನೆ ಕುಮಟಾದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಬಶೀರ ಸಾಬ್ ರಾಜಾಸಾಬ ಸಂಕನೂರ (೩೨) ಎಂದು ತಿಳಿದು ಬಂದಿದೆ.

ಕೊಲೆಯಾದ ವ್ಯಕ್ತಿ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದು, ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಹೊಸೂರಿನ ವ್ಯಕ್ತಿ. ಈತನ ಪತ್ನಿ ರಾಜಮ್ಮ ತನ್ನ ಸ್ನೇಹಿತ ಪರಸುರಾಮ ಜೊತೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಗಂಡನನ್ನು ಕೊಲೆ ಮಾಡಿಸಿದ್ದಾಳೆ.

ಆರೋಪಿತರಾದ ಪರಶುರಾಮ ಹನುಮಪ್ಪ ಮಾದರ, ರವಿ ದಾನಪ್ಪ ಮಾದರ, ರಾಜಮ್ಮ ಬಶೀರ್ ಸಾಬ್ ಸಂಕನೂರ, ಬಸವರಾಜ ಸಂಗಪ್ಪ ಕುಂಬಾರ ಇವರುಗಳನ್ನು ಬಂಧಿಸಲಾಗಿದೆ.

ಕೊಲೆಯಾದ ವ್ಯಕ್ತಿ ಬಶೀರ ಸಾಬ್ ನ ಪತ್ನಿ
ರಾಜಮಾ ಮತ್ತು ಆಕೆಯ ಸ್ನೇಹಿತ ಪರಸುರಾಮ ಇವರ ಮಧ್ಯೆ ಪ್ರೀತಿ ಹಾಗೂ ಅನೈತಿಕ ಸಂಬಂಧ ಇದ್ದು, ತಮ್ಮ ಪ್ರೀತಿಗೆ ಬಶೀರಸಾಬನು ಅಡ್ಡಿಯಾಗಬಹುದೆಂದು ತಿಳಿದು, ಪರಸುರಾಮ ಮತ್ತು ರಾಜಮಾ ಸೇರಿ ಬಶೀರಸಾಬನನ್ನು ಹೇಗಾದರೂ ಮಾಡಿ ಕೊಲೆ ಮಾಡಿ ನಾಪತ್ತೆ ಮಾಡಬೇಕೆಂದು ಸಂಚು ರೂಪಿಸಿದ್ದು, ಕೊಲೆ ಮಾಡುವ ಸಲುವಾಗಿ ರಾಜಮಾಳು ಪರಸುರಾಮನಿಗೆ 10,000 ರೂ. ಕೊಟ್ಟು ಕಳಿಸಿದ್ದಾರೆ. ನಂತರ ಪರಸುರಾಮನು
ಬಶೀರಸಾಬನನ್ನು ಕೊಲೆ ಮಾಡುವ ಉದ್ದೇಶಕ್ಕೆ ಪರಸುರಾಮನ ದೊಡ್ಡಮ್ಮನ ಮಗ ರವಿಯನ್ನು ಕರೆಸಿಕೊಂಡು ಮಂಗಳೂರಿನಲ್ಲಿ ಇದ್ದ ಪರಸುರಾಮನ ಸ್ನೇಹಿತ ಆದೇಶ ಕುಂಭಾರನಿಗೆ ವಿಷಯ ತಿಳಿಸಿ. ನಂತರ ಬಶೀರಸಾಬನಿಗೆ ಮಂಗಳೂರ ಕಡೆಗೆ ಹೋಗಿ ಬೀಚ್ ನೋಡಿಕೊಂಡು ಬರೋಣವೆಂದು ಪುಸುಲಾಯಿಸಿ ಸೆ. ೨೮ ಕ್ಕೆ
ಕರೆದುಕೊಂಡು ಹೋಗಿದ್ದಾರೆ.

RELATED ARTICLES  ಕುಮಟಾದ ಬಗ್ಗೋಣದಲ್ಲಿ ಘಟನೆ : ಯುವಕರಿಗೆ ಬಿತ್ತು ಧರ್ಮದೇಟು : ಕಾರಣ ಕೇಳಿದ ಜನರೇ ದಂಗು..!

ತಮ್ಮ ಊರಾದ ಮುಸಿಗೇರಿಯಿಂದ ಗಜೇಂದ್ರಗಡಕ್ಕೆ ಬಂದು ಆದೇಶ ಕುಂಬಾರ ಇತನ ಸೂಚನೆಯಂತೆ ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ ಮಂಗಳೂರಗೆ ತಲುಪಿ, ಆದೇಶ ಕುಂಭಾರನ್ನು ಭೇಟಿಯಾಗಿ ನಂತರ ಪರಸುರಾಮ, ರವಿ, ಆದೇಶ ಮತ್ತು ಬಶೀರಸಾಬ ಸೇರಿ ಮಂಗಳೂರಿನಲ್ಲಿ ಬೀಚ್ ಸುತ್ತಾಡಿದ್ದಾರೆ. ಅಲ್ಲಿ ಬಶೀರ ಸಾಬನಿಗೆ ಸರಾಯಿ ಕುಡಿಸಿ ಕುಮಟಾ-ಶಿರ್ಶಿ ಮಧ್ಯೆ ದೇವಿಮನೆ ಘಟ್ಟದಲ್ಲಿ ಆನೆಮೂರ್ತಿ ಇದ್ದ
ದೇವಸ್ಥಾನದ ಹತ್ತಿರ ಕೊಲೆ ಮಾಡುವ ಬಗ್ಗೆ ಪರಸುರಾಮ, ರವಿ, ಆದೇಶ ಸೇರಿಕೊಂಡು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಸೆ. ೨೯ ರಂದು ಮಧ್ಯಾಹ್ನ ಪರಸುರಾಮ, ರವಿ, ಸೇರಿ ಬಶೀರಸಾಬನನ್ನು ಕರೆದುಕೊಂಡು ದೇವಿಮನೆ ಘಾಟ್ ಹತ್ತಿರ ಒಂದು ದೇವಸ್ಥಾನ ಇದೆ ಅದನ್ನು ನೋಡಿಕೊಂಡು ಹೋಗೋಣ ಎಂದು ಹೇಳಿ ಮಂಗಳೂರಿನಿಂದ ಬಸ್ ನಲ್ಲಿ ಬಂದು ದೇವಿಮನೆ ಘಾಟ್ ಹತ್ತಿರ ಇದ್ದ ಮಾಸ್ತಿಮನೆ ಕ್ಷೇತ್ರಪಾಲ ದೇವಸ್ಥಾನದ ಹಿಂದುಗಡೆ ಹೋಗಿ ಅಲ್ಲಿ ಬಶೀರಸಾಬನಿಗೆ ಸರಾಯಿ ಕುಡಿಸಿ ಪರಸುರಾಮ ಮತ್ತು ರವಿ ಸೇರಿಕೊಂಡು ಕಟ್ಟಿಗೆ ಬಡಿಗೆಯಿಂದ ಬಶೀರಸಾಬನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ದೇವಸ್ಥಾನದ ಹಿಂದುಗಡೆ ಬಿಸಾಡಿದ್ದಾರೆ.

RELATED ARTICLES  ಗಣಪತಿಗೆ ಇದೆ ಹತ್ತಾರು ಅವತಾರ

ಕುಮಟಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ, ಪಿಎಸ್ಐ ನವೀನ ನಾಯ್ಕ, ಪಿಎಸ್ಐ ಇ.ಸಿ ಸಂಪತ್, ಪಿಎಸ್ಐ ಸುನಿಲ್ ಬಂಡಿವಡ್ಡರ್, ಲೋಕೇಶ ಅರಿಶಿಣಗುಪ್ಪಿ, ರಾಜು ನಾಯ್ಕ, ರವಿ ನಾಯ್ಕ, ಗಣೇಶ ನಾಯ್ಕ, ಗುರು ನಾಯಕ ಪ್ರದೀಪ ನಾಯಕ, ಸಂತೋಷ ಚಿನ್ನಣ್ಣನವರ, ಹುಚ್ಚಪ್ಪ ಚಾವಡಿ, ಮಾದೇವಿ ಗೌಡ, ನಿರಂಜನ್ ನಾಯ್ಕ, ಶಿವಾನಂದ ಜಾಡರ್, ಮಲ್ಲಿಕಾರ್ಜುನ ಹುಗ್ಗಿ ಕಾರ್ಯಾಚರಣೆ ಕೈಗೊಂಡಿದ್ದರು.

ಪ್ರಕರಣ ಭೇದಿಸುವಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಅತಿ ಶೀಘ್ರವಾಗಿ ಕಾರ್ಯಾಚರಣೆ ಕೈಗೊಂಡ ಪೊಲೀಸರ ಬಗೆಗೆ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.