ಯಲ್ಲಾಪುರ: ತಾಲೂಕಿನ ಜೋಗದಮನೆಯ ಗೋಪಾಲಕೃಷ್ಣ ದತ್ತಾತ್ರೇಯ ಹೆಬ್ಬಾರ ಅವರ ಮನೆಯಲ್ಲಿ ಇಟ್ಟಿದ್ದ ಸುಮಾರು 50 ಕೆಜಿ ತೂಕದ ಮೂರು ಅಡಿಕೆ ಚೀಲಗಳನ್ನು ಕದ್ದೊಯ್ದಿದ್ದ
ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಅಂಕೋಲಾ ತಾಲೂಕಿನ ಮಳಲಗಾಂವನ ದೇವೇಂದ್ರ ಕುಟ್ಟು ತಂದೆ ನಾಗೇಶ ಸಿದ್ಧಿ, ರವಿಚಂದ್ರ ತಂದೆ ಅನಂತ ಸಿದ್ದಿ, ಕೃಷ್ಣ ತಂದೆ ನಾಗಪ್ಪ ಸಿದ್ದಿ, ಕಾರ್ತಿಕ ತಂದೆ ನಾಗಪ್ಪ ಸಿದ್ದಿ ಅವರನ್ನು ಬಂಧಿಸಲಾಗಿದೆ.

RELATED ARTICLES  ಇಂದು ಉತ್ತರಕನ್ನಡದಲ್ಲಿ 65 ಜನರಿಗೆ ಕರೋನಾ ಪಾಸಿಟಿವ್

ಆರೋಪಿಗಳಿಂದ ಕಳ್ಳತನ ಮಾಡಿದ್ದ ಅಂದಾಜು 55 ಸಾವಿರ ರೂ ಮೌಲ್ಯದ 1.5 ಕ್ವಿಂಟಾಲ್ ಅಡಿಕೆ ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು
ವಶಪಡಿಸಿಕೊಳ್ಳಲಾಗಿದೆ.

RELATED ARTICLES  ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ