ಶಿರಸಿ: ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಗರದ ಸಿ.ಪಿ. ಬಜಾರದಲ್ಲಿ ನಡೆದಿದೆ.ಅನುಶ್ರೀ ರಾಜಶೇಖರ ಶೆಟ್ಟರ್ (3) ಮೃತಪಟ್ಟ ಬಾಲಕಿ. ಈಕೆಯ ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

RELATED ARTICLES  ಸಮುದ್ರಪಾಲಾಗುತ್ತಿದ್ದ ನಾಲ್ವರ ರಕ್ಷಣೆ.

ಬಾವಿ ಸಮೀಪ ಆಟವಾಡುತ್ತಿದ್ದ ಮಗು ಆಟವಾಡುತ್ತ ನೇರವಾಗಿ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ತಾಯಿ ಸಹಾಯಕ್ಕಾಗಿ ಕೂಗಿದ್ದಾರೆ ಎನ್ನಲಾಗಿದೆ. ಸ್ಥಳೀಯರಾದ ಶಂಭು ಶೆಂಮಡಿ ಎಂಬುವರು ಕೂಡಲೇ ಬಾವಿಗೆ ಇಳಿದು ಮಗು ತೆಗೆಯಲು ಪ್ರಯತ್ನಿಸಿದರೂ ಅದಾಗಲೇ ಮಗು ಮೃತಪಟ್ಟಿದೆ.

RELATED ARTICLES  ಚತುರ್ಭುಜಃ

ನಗರಠಾಣೆ ಪಿಎಸ್‌ಐ ರಾಜಕುಮಾರ ಉಕ್ಕಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ,ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.