ಹೊನ್ನಾವರ : ಉತ್ತರ ಕನ್ನಡ ಜನರಿಗೆ ಬಹು ಪರಿಚಿತರಾದ ಹಾಗೂ ಅನೇಕ ರೋಗಿಗಳ ಪಾಲಿನ ಆಪದ್ಬಾಂಧವರಾಗಿದ್ದ, ಡಾ. ಯು ಕೆ ಅವಧಾನಿ ಇಂದು ಹೃದಯಾಘಾದಿಂದ ನಿಧನರಾಗಿದ್ದಾರೆ. ಸದಾ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಖ್ಯಾತ ಕಣ್ಣಿನ ವೈದ್ಯರಾಗಿದ್ದ ಡಾ. ಯು ಕೆ ಅವಧಾನಿ ನಿನ್ನೆ ಸಂಜೆಯವರೆ ಹೊನ್ನಾವರ ಹಾಗೂ ಕರ್ಕಿಯ ಕ್ಲಿಕ್ ಗೆ ಭೇಟಿ ನೀಡಿ ಅಲ್ಲಿ ಸಹ ರೋಗಿಗಳ ತಪಾಸಣೆ ಮಾಡಿದ್ದು ಬಳಿಕ ಅವರು ತುಮಕೂರಿನಲ್ಲಿ ಇರುವ ಮಗಳ‌ ಮನೆಗೆ ಉಳಿದು ಬರಲು ಹೋಗಿದ್ದರು ಎನ್ನಲಾಗಿದ್ದು ಈ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದಾರೆ.

RELATED ARTICLES  ವಿಭಾಗ ಮಟ್ಟದ ಗಣಿತ ಒಗಟು ಸ್ಪರ್ಧೆಯಲ್ಲಿ ಸಿವಿಎಸ್‌ಕೆಯ ರುಚಿತ ಗೌಡ ದ್ವಿತೀಯ

ಡಾ. ಯು ಕೆ ಅವಧಾನಿ ಅವರು ಹೊನ್ನಾವರ ತಾಲೂಕಿನ ಕರ್ಕಿ ನಿವಾಸಿಯಾಗಿದ್ದು, ಅನೇಕ ವರ್ಷದಿಂದ ಅವರು ಹೊನ್ನಾವರದಲ್ಲಿ ವಾಸವಾಗಿದ್ದಾರೆ.ಹೊನ್ನಾವರದಲ್ಲಿ ವಾಸವಿದ್ದರೂ ಕೂಡ ತನ್ನ ಊರ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎನ್ನುವ ಉದ್ದೇಶದಿಂದ ಅವರು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಈ ಎರಡು ಸಮಯದಲ್ಲಿ ‌ಕರ್ಕಿಗೆ ಬಂದು ಆರೋಗ್ಯ ಸೇವೆ ನೀಡುತ್ತಿದ್ದರು.

RELATED ARTICLES  ಖಾಸಗಿ ಸುದ್ದಿ ಸಂಸ್ಥೆಯ ಹೆಸರುನ್ನು ದುರ್ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆ : ಆರೋಪಿಗಳು ಅರೆಸ್ಟ್

ಇವರು ಕೇವಲ ಕಣ್ಣಿಗೆ ಸಂಬಂಧಿಸಿದ ವೈದ್ಯರಾಗದೆ ಎಲ್ಲಾ ಖಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಿದ್ದರು. ಯಾರೆ ಬಡವರು ಹಣ ವಿಲ್ಲದೆ ಚಿಕಿತ್ಸೆಗೆ ಬಂದರೆ ಖಷಿಯಿಂದಲ್ಲೆ ಚಿಕಿತ್ಸೆ ನೀಡುತ್ತಿದ್ದರು. ಇನ್ನೂ ಕರೋನಾ ಸಂಧರ್ಭದಲ್ಲಿ ಸಹ ನಿತ್ಯವೂ ಚಿಕಿತ್ಸೆ ‌ಕೊಡಿಸಿದ್ದಾರೆ. ಡಾ. ಅವಧಾನಿ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಹೊನ್ನಾವರ ತಾಲೂಕಿನಾದ್ಯಂತ ಮೌನ ಆವರಿಸಿದೆ.