ಗೋಕರ್ಣ :ರೂಢಿಗತ ಪರಂಪರೆಯಂತೆ ಗಂಗಾಷ್ಟಮಿಯ ಪರ್ವಕಾಲದಲ್ಲಿ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ದಿನಾಂಕ 12-10-2017 ಗುರುವಾರ ಸಂಪನ್ನಗೊಂಡಿತು.
ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಿತಾರ್ಥದಂತೆ ‘ಶಿವಗಂಗಾ’ ವಿವಾಹ ಮಹೋತ್ಸವವು ದಿನಾಂಕ 18-10-2017 ಬುಧವಾರ (ಆಶ್ವೀಜ ಬಹುಳ ಚತುರ್ದಶಿಯಂದು) ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ನೆರವೇರುತ್ತದೆ.