ಕುಮಟಾ : ತಾಲೂಕಿನ ಶಕ್ತಿ ಕ್ಷೇತ್ರ ಹಾಗೂ ಗ್ರಾಮದೇವಿ ದೇವರಹಕ್ಕಲಿನಲ್ಲಿರುವ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ಹೂವಿನ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ತಾಯಿ ಸರ್ವಾಲಂಕಾರ ಭೂಷಿತೆಯಾಗಿ  ಕಂಗೊಳಿಸಿದ ಅಪೂರ್ವ ಕ್ಷಣವನ್ನು ಭಕ್ತಾದಿಗಳು ಕಣ್ಣುತುಂಬಿಕೊಂಡರು. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಹೂವಿನ ಪೂಜಾ ಸೇವೆಯನ್ನು ಇಲ್ಲಿಯ ಭಕ್ತ ಮಂಡಳಿ ನೀಡುತ್ತ ಬಂದಿದೆ.

RELATED ARTICLES  ರಾಹುಲ್ ಗಾಂಧಿ ರಕ್ತವನ್ನು ಸಿದ್ಧರಾಮಯ್ಯ ಪರೀಕ್ಷೆಮಾಡಿ ಹೇಳಬೇಕು ಎಂದು ಲೇವಡಿ ಮಾಡಿದ ಅನಂತ್ ಕುಮಾರ ಹೆಗಡೆ.

ಸುಮಾರು ೧ ಲಕ್ಷಕ್ಕೂ ಹೆಚ್ಚು ಬೆಲೆಯ ಹೂವಿನಿಂದ ಸಂಪೂರ್ಣ ದೇವಾಲಯ ಹೂಮಯವಾಗಿಸಿದ್ದ ಸ್ಥಳೀಯರು, ತಮ್ಮದೆ ಆದ ಕಲೆಯಿಂದ ಹೂವಿನಿಂದ ದೇವಾಲಯದ ಅಂದ ಹೆಚ್ಚಿಸಿದ್ದರು. ಡೇರೆ, ಸೇವಂತಿಗೆ, ಪಾರಿಜಾತ, ಕನಕಾಂಬರ ಹೀಗೆ ನೂರಾರು ವಿಧದ ಹೂವುಗಳನ್ನು ಬಳಸಿ ಹೂವಿನ ಮಂಟಪವನ್ನು ರಚಿಸಲಾಗಿತ್ತು. 

RELATED ARTICLES  ದಿವಂಗತ ಶ್ರೀಪಾದ ಹೆಗಡೆ ಹಡಿನಬಾಳ ಸಂಸ್ಮರಣೆ ಮತ್ತು ತಾಳಮದ್ದಲೆ

ದೇವಿಗೆ ಮಹಾಪೂಜೆ, ಭಜನಾ ಸೇವೆ ಇತರ ಧಾರ್ಮಿಕ ಕಾರ್ಯಕ್ರಮ ನಡೆಯಿತು