ಭಟ್ಕಳ : ವೀರಲೋಕ ಪ್ರಕಾಶನ ಬೆಂಗಳೂರು ,ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ ಸಯ್ಯದ್ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನ, ಭಟ್ಕಳ ಇವರ ಸಹಯೋಗದಲ್ಲಿ ಅಕ್ಟೋಬರ್ ೨೧ ಮತ್ತು ೨೨ರಂದು ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕಥಾ ಕಮ್ಮಟ ನಡೆಯಲಿದೆ. ಆಸಕ್ತ ಮೂವತ್ತು ಶಿಭಿರಾರ್ಥಿಗಳಿಗೆ ಮಾತ್ರ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದ ಆಸಕ್ತರಿಗೆ ಅವಕಾಶ ಕಲ್ಪಿಸಲಾಗುವುದಲ್ಲದೇ ಎರಡು ದಿನ ನಡೆಯುವ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಹಿರಿಯ ಕಥೆಗಾರ ಶ್ರೀಧರ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಕಥಾಕಮ್ಮಟ ನಡೆಯಲಿದ್ದು ನಾಡಿನ ಪ್ರಮುಖ ಕಥೆಗಾರರು ಭಾಗವಹಿಸಿ ಕಥೆ ಕಟ್ಟುವಿಕೆ ಮತ್ತು ಅದರ ಸೂಕ್ಷ್ಮತೆಗಳ ಕುರಿತು ಅವಲೋಕಿಸುವರಲ್ಲದೇ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕಮ್ಮಟದ ಜಿಲ್ಲಾ ಸಂಚಾಲಕರಾದ ಸಾಹಿತಿ ಡಾ. ಸೈಯ್ಯದ್ ಝಮೀರುಲ್ಲ ಷರೀಫ್ ತಿಳಿಸಿದ್ದಾರೆ.ಕಥಾ ಕಮ್ಮಟದಲ್ಲಿ ಭಾಗವಹಿಸಲು ಆಸಕ್ತರು ವೀರಲೋಕ ಬುಕ್.ಕಾಮ್. ಜಾಲತಾಣದಿಂದ ಅರ್ಜಿಯನ್ನು ಡೌನಲೋಡ್ ಮಾಡಿಕೊಂಡು ಇದೇ ಅಕ್ಟೋಬರ್ ೧೫ರ ಒಳಗೆ 9448007703 ನಂಬರಿಗೆ ವಾಟ್ಸಪ್ ಮೂಲಕ ಕಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 99002426956/ 8310093198/ 9141111611 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.