ಹೊನ್ನಾವರ:ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತು , ಬೆಂಗಳೂರು ಇದರ ¸ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ರಾಜ್ಯದ ೭೧ನೇ ಐಪಿ ಸೆಲ್ ಇದರ ಉದ್ಘಾಟನಾ ಸಮಾರಂಭ ನಡೆಯಿತು. ಕರ್ನಾಟಕ ವಿಜ್ಞಾನ ಪರಿಷತ್ತು , ಬೆಂಗಳೂರು ಇದರ ಎಕ್ಸಿಕ್ಯೂಟಿವ್ ಸೆಕ್ರೆಟರಿ ಡಾ.ವಿಜಯ್ ಐಪಿ ಸೆಲ್ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಾವಿನ್ಯತೆ ಸಂಶೋಧನೆಯ ಉದ್ದೇಶದಿಂದ ಈ ಐಪಿ ಸೆಲ್ ಪ್ರಾರಂಭಿಸುತ್ತಿದ್ದೇವೆ.ವಸ್ತುಗಳ ಮೇಲೆ ಹಕ್ಕು ಸ್ಥಾಪಿಸುವುದು, ಅದರಲ್ಲಿ ಲಾಂಛನ,ಟ್ರೇಡ್ ಇದನ್ನು ಜಾಗತಿಕ ಮಟ್ಟದಲ್ಲಿ ನಮ್ಮ ಸ್ಥಳೀಯ ವಿಶೇಷತೆಗಳನ್ನು ತಲುಪಿಸಲು ಸಹಾಯಕವಾಗಲಿದೆ.

ಧನಾತ್ಮಕ ಆಲೋಚನೆಯಿಂದ ಶುರುವಾದ ಕಾರ್ಯಕ್ರಮ ಇದಾಗಿದೆ. ೫೦ ಕ್ಕೂ ಹೆಚ್ಚಿನ ಪದವಿ ಕಾಲೇಜುಗಳು ರಾಜ್ಯದಲ್ಲಿ ಐಪಿ ಸೆಲ್ ಹೊಂದಿದೆ. ಆದರೆ ಉತ್ತರಕನ್ನಡಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ಜಿಲ್ಲೆಯಲ್ಲಿ ೨ನೇ ಐಪಿ ಸೆಲ್ ಪ್ರಾರಂಭವಾಗಿದೆ. ವಿವಿಧ ರೀತಿಯ ಸ್ಥಳಿಯ ವಸ್ತುಗಳ ಸಂಶೋಧನೆ ಹಾಗೂ ಇದರ ಬೆಳವಣಿಗೆಗೆ ಈ ಸೆಲ್ ಫ್ಲಾಟ್‌ಫಾರಂ ಒದಗಿಸಲಿದೆ. ಭಾರತವು ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರಿಯುತ್ತದೆ. ಅಂತೆಯೇ ಜಾಗತಿಕ ಮಟ್ಟದಲ್ಲಿ ಎಂ.ಪಿ.ಇ.ಸೊಸೈಟಿ ಹೆಸರನ್ನು ಗಳಿಸಲಿ ಎಂದು ಆಶಿಸಿದರು.

RELATED ARTICLES  ಬೈಕ್ ಸ್ಕಿಡ್ ಆಗಿ ಬಿದ್ದು ವ್ಯಕ್ತಿ ಸಾವು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್,ಶಿವಾನಿ ಮಾತನಾಡಿ ಇದೊಂದು ವಿನೂತನ ಕಾರ್ಯಕ್ರಮ.ವಿದ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸಾಮಾನ್ಯ. ಆದರೆ ನಮ್ಮ ವಿಚಾರ ಜನಸ್ನೇಹಿ, ರೈತಸ್ನೇಹಿ ಹಾಗೂ ಪರಿಸರ ಸ್ನೇಹಿಯಾಗಿದೆ. ಹೊಸಬಗೆಯ ಕಾರ್ಯಕ್ರಮವನ್ನು ಪ್ರಾರಂಭಿಸಿ ಸಮಾಜದಲ್ಲಿ ಮಾದರಿಯಾಗುತ್ತಿದೆ. ನಾವು ಕೆ.ಜಿಯಿಂದ ಪಿ.ಜಿಯವರೆಗೆ ಮೌಲ್ಯಯುತ ಶಿಕ್ಷಣವನ್ನು ನೀಡ್ತೇವೆ. ಹೊನ್ನಾವರ ವಿಶಿಷ್ಠತೆಯಿಂದ ಕೂಡಿದೆ. ಹೊನ್ನಾವರದ ರಾಣಿ ಎಲೆ ( ವೀಳ್ಯದೆಲೆ)ಫೇಮಸ್ ಇದೆ. ಈ ಎಲೆಯನ್ನು ಭೋಪಾಲ್ ಗೆ ಕಳುಹಿಸಲಾಗುತ್ತದೆ. ಹೊನ್ನಾವರದಲ್ಲಿ ಸಿಗುವಂತಹ ರಾಣಿ ಎಲೆ (ವೀಳ್ಯದೆಲೆ) ಮತ್ತೆ ಎಲ್ಲಿಯೂ ಸಿಗುವುದಿಲ್ಲ. ಇದರ ಬ್ರಾö್ಯಂಡ್ ನಾವು ಪಡೆಯುವ ಆಲೋಚನೆಯನ್ನು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಈಗ ಪ್ರಾರಂಭಿಸಿರುವ ಐಪಿ ಸೆಲ್ ನಲ್ಲಿ ಯಶಸ್ವಿಯಾಗಿ ಕೆಲಸವನ್ನು ಮಾಡುವ ಭರವಸೆಯನ್ನು ನೀಡಿದರು.

RELATED ARTICLES  'ಶಕ್ತಿ ಸಂಚಯ' ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.

ಇದೇ ವೇಳೆ ಎರಡು ಸಂಸ್ಥೆಗಳ ನಡುವಿನ ಒಡಂಬಡಿಕೆಗೆ ಸಹಿಯನ್ನು ಎರಡು ಸಂಸ್ಥೆಯ ಮುಖ್ಯಸ್ಥರು ಸಹಿಯನ್ನು ಹಾಕಿದರು. ಕರ್ನಾಟಕ ವಿಜ್ಞಾನ ಪರಿಷತ್ತು , ಬೆಂಗಳೂರು ಇಲ್ಲಿಂದ ಸಂಯೋಜನಾಧಿಕಾರಿಗಳಾದ ಶ್ರೀಮತಿ.ಪ್ರಿಯಾಂಕ ಹಾಗೂ ಶ್ರೀ.ನಾಗಾರ್ಜುನ ಇವರು ಕ್ರಮವಾಗಿ ಐಪಿಆರ್ ಹಾಗೂ ಪೇಟೆಂಟ್‌ಗಳ ಕುರಿತು ಮಾಹಿತಿಯನ್ನು ನಿಡಿದರು. ಅನಿಲ್ ಆರ್ ನಾಯ್ಕ , ತಾಂತ್ರಿಕಾಧಿಕಾರಿಗಳು, ಓಖಆಒS ಕಾರವಾರ ಇವರು ಐಪಿ ಘಟಕದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯರಾದ ಡಾ. ಪಿ. ಎಂ. ಹೊನ್ನಾವರ ಅವರು ಸ್ವಾಗತಿಸಿದರು, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಎಸ್. ಸುರೇಶ ವಂದಿಸಿದರು. ಉಪನ್ಯಾಸಕಿ ವೆಲೆನ್‌ಸ್ಲಿಯಾ ಡಿಸೋಜಾ ನಿರ್ವಹಿಸಿದರು. ಎಂ. ಪಿ. ಇ. ಸಂಸ್ಥೆಯ ಕರ‍್ಯದರ್ಶಿ ಶ್ರೀ ಎಸ್. ಎಂ. ಭಟ್ಟ, ಜಂಟಿ ಕಾರ್ಯದರ್ಶಿ ಶ್ರೀ ಜಿ. ಪಿ. ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.