ಕಾರವಾರ: ಉತ್ತರ ಕನ್ನಡದ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೈಟೆಕ್ ಮೆಡಿಕಲ್ ಸೌಲಭ್ಯಗಳಿವೆ. ಆದರೆ, ಇಲ್ಲಿ ಮಾತ್ರ ಒಂದು ಅವಘಡ ಆದರೂ ಜೀವ ಉಳಿಸಿಕೊಳ್ಳಲು ಕನಿಷ್ಠ 1೦೦ ಕಿಲೋಮೀಟರ್ ಪ್ರಯಾಣಿಸಬೇಕಾದ ಅನಿವಾರ‍್ಯತೆ ಇದೆ. ಈ ಜ್ವಲಂತ ಸಮಸ್ಯೆ ನೀಗಿಸಲು, ಸರಕಾರದ ಕಣ್ಣು ತೆರೆಸಲು ನವೆಂಬರ್ 2ರಿಂದ 9ತನಕ ಶಿರಸಿಯಿಂದ ಕಾರವಾರದ ತನಕ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಪ್ರಕಟಿಸಿದರು.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಶಿರೂರಿನಲ್ಲಿ ನಡೆದ ದುರಂತದ ಬಳಿಕ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಕ್ಕೊತ್ತಾಯದ ಹೋರಾಟಗಳು ನಡೆದವು. ಆದರೆ, ಪ್ರಯೋಜನ ಆಗಲಿಲ್ಲ. ಟ್ರಾಮಾ ಸೆಂಟರ್, ಕುಮಟಾದಲ್ಲಿ ಹೈಟೆಕ್ ಮೆಡಿಕಲ್ ಆಸ್ಪತ್ರೆಗೆ ಸ್ಥಳ ನೋಡಿದರೂ ರಾಜ್ಯ ಸರಕಾರ ಮುಂದುವರಿದಿಲ್ಲ. ಜನರ ಸಮಸ್ಯೆ ಮಾತ್ರ ನೀಗಿಲ್ಲ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಹೃದಯ ಕಾಯಿಲೆ ಸೇರಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗೂ ಇಲ್ಲಿ ಸ್ಪಂದನೆ ಸಿಗದು. ತುರ್ತು ಚಿಕಿತ್ಸೆ ಮಾಡಿದರೂ ಮುಂದಿನ ಪ್ರಯಾಣ ಅನಿವಾರ‍್ಯವಾಗಿದೆ. ಜಿಲ್ಲೆಯಿಂದ ಎರಡ್ಮೂರು ಬಸ್ಸುಗಳ ಮೂಲಕ ಮಣಿಪಾಲ, ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವದು ಅನಿವಾರ‍್ಯವಾಗಿದೆ ಎಂದರು.

ಸ್ವಾತಂತ್ರ್ಯ ಬಂದು 76 ವರ್ಷ ಆದರೂ ಮೂಲಭೂತವಾಗಿ ಬೇಕಾದ ಆರೋಗ್ಯ ಸುರಕ್ಷತೆ ಜಿಲ್ಲೆಯಲ್ಲಿ ಇಲ್ಲ. ಕಾರವಾರದಲ್ಲಿ ಒಂದು ಮೆಡಿಕಲ್ ಕಾಲೇಜು ಇದ್ದರೂ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಉಡುಪಿ, ಶಿವಮೊಗ್ಗಕ್ಕೆ ಹೋದಷ್ಟೇ ದೂರವಾಗುತ್ತದೆ. ಅಲ್ಲಿನ ಸರಕಾರಿ ಮೆಡಿಕಲ್ ಕಾಲೇಜಿಗೂ ಬೇಕಾದ ಸೌಲಭ್ಯ ಸರಕಾರ ನೀಡಿಲ್ಲ. ಪೂರ್ಣ ಪ್ರಮಾಣದ ಟ್ರಾಮಾ ಸೆಂಟರ್ ಸೇರಿದಂತೆ ಆಧುನಿಕ ಸೌಲಭ್ಯದ ಮೆಡಿಕಲ್ ಕಾಲೇಜು, ಹೈಟೆಕ್ ಆಸ್ಪತ್ರೆ ಜಿಲ್ಲೆಗೆ ಬೇಕಾಗಿದೆ. ರಾಜ್ಯದ ದೊಡ್ಡ ಜಿಲ್ಲೆಗಳ ಸಾಲಿನಲ್ಲಿ ಇರುವ ಉತ್ತರ ಕನ್ನಡದಲ್ಲಿ ಆರೋಗ್ಯ ಸುರಕ್ಷತೆಗೆ ಹಾಗೂ ಜನರ ಜೀವ, ಜೀವನದ ರಕ್ಷಣೆಗೆ ಆರೋಗ್ಯ ಭಾಗ್ಯ ಕೊಡಲೇಬೇಕಾಗಿದೆ. ಆದರೆ, ಇಚ್ಛಾ ಶಕ್ತಿ ಕೊರತೆಯಿಂದ ಅದು ಈಡೇರಿಲ್ಲ ಎಂದರು.

ಪಾದಯಾತ್ರೆ ರಾಜಕೀಯ ಉದ್ದೇಶವಿಲ್ಲ. ಜನರ ನೋವಿಗೆ ಧ್ವನಿಯಾಗುವ ಉದ್ದೇಶವಿಷ್ಟೇ. ಈ ಅಭಿಯಾನದಲ್ಲಿ ಎಲ್ಲರೂ ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು. ಸಂಯೋಜನೆ ಮಾತ್ರ ನಾವು ಮಾಡುತ್ತಿದ್ದೇವೆ. ಶಿರಸಿಯಲ್ಲಿ ನವೆಂಬರ್ 2 ಕ್ಕೆ ಪಾದಯಾತ್ರೆಯನ್ನು ದಕ್ಷಿಣ ಭಾರತದ ಶಕ್ತಿ ದೇವತೆ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಆರಂಭಿಸುತ್ತೇವೆ. ಅಲ್ಲಿಂದ ನಿತ್ಯ 15-25 ಕಿಲೋಮೀಟರ್ ನಡೆದು ನವೆಂಬರ್ 9 ಗೆ ಕಾರವಾರ ತಲುಪಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ.

ಆ ಮಾರ್ಗದ ಆಯಾ ಗ್ರಾಮ ಪಂಚಾಯ್ತಿಗಳು ವ್ಯಾಪ್ತಿಯ ಜನರು ನಮಗೆ ಮನದುಂಬಿದ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಹಣ ಉಳ್ಳವರು ಎಲ್ಲಾದರೂ ಚಿಕಿತ್ಸೆ ಪಡೆಯಬಹುದು. ಆದರೆ, ಬಡವರಿಗೆ, ಸಾಮಾನ್ಯ ವರ್ಗದವರಿಗೆ ಸುಲಭದ, ಕಡಿಮೆ ದರದ ಉನ್ನತ ಚಿಕಿತ್ಸೆ ಸರ್ಕಾರಿ ಮೆಡಿಕಲ್ ಕಾಲೇಜಿನಿಂದ ಮಾತ್ರ ಸಾಧ್ಯವಿದೆ. ಮೆಡಿಕಲ್ ಕಾಲೇಜು ಜೀವ ಉಳಿಸಲು ತಕ್ಷಣದ ಚಿಕಿತ್ಸೆ ಜೊತೆ ರೋಗಿಯ ಕಿಸೆಯ ಭಾರ ಕೂಡ ಕಡಿಮೆ ಮಾಡಲಿದೆ ಎಂದರು.

RELATED ARTICLES  ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

ಮೆಡಿಕಲ್ ಕಾಲೇಜು ಕೊಡಿ, ಜೀವ ದಾನ ಮಾಡಿ

ಮೆಡಿಕಲ್ ಕಾಲೇಜು ಯಾಕೆ ಬೇಕು?

ಉತ್ತರ :- ಎಲ್ಲಿಯ ತನಕ ಮೆಡಿಕಲ್ ಕಾಲೇಜು ಇರುವುದಿಲ್ಲವೋ ಅಲ್ಲಿಯ ತನಕ ವೈದ್ಯರು ಸಿಗುವುದಿಲ್ಲ , ಶಿರಸಿ ಸರ್ಕಾರಿ ಆಸ್ಪತ್ರೆ ಯಲ್ಲಿ ಸುಮಾರು ಒಂದು ವರ್ಷದಿಂದ ಜನರಲ್ ಪಿಜಿಷಿಯನ್ ಇಲ್ಲ , ಎಲ್ಲ ಇರುವ ಆಸ್ಪತ್ರೆ ಯಲ್ಲಿ ವೈದ್ಯರ ಕೊರತೆ ಇದು ಸರಿ ಹೋಗಬೇಕು ಅಂದರೆ ಮೆಡಿಕಲ್ ಕಾಲೇಜು ಪ್ರಾರಂಭ ಆಗಬೇಕು, ಆಗ ನುರಿತ ೫೦ ಮಂದಿ ವೈದ್ಯರು ಶಿಕ್ಷಕ ರಾಗಿ ಬರುತ್ತಾರೆ, ಅವರ ಸೇವೆ ನಮಗೆ ಸಿಗುತ್ತದೆ , ವೈದ್ಯ ವಿದ್ಯಾರ್ಥಿ ಗಳು ನಮಗೆ ಸೇವೆಗೆ ಸಿಗುತ್ತಾರೆ ಅದರಿಂದ ಆಸ್ಪತ್ರೆ ನಡೆಸಬಹುದು, ಇಲ್ಲದೆ ಹೋದರೆ ಯಾವುದೇ ಆಸ್ಪತ್ರೆ ಮಾಡಿ ಪ್ರಯೋಜನ ಇಲ್ಲ

ಮೆಡಿಕಲ್ ಕಾಲೇಜು – ಆಸ್ಪತ್ರೆ ಆಗೋವರೆಗೂ ಸುಮ್ಮನೆ ಕೂರುವ ಮಾತೇ ಇಲ್ಲ ಇನ್ನು ನಾವು ಸುಮ್ಮನೆ ಕೂತರೆ ನಮ್ಮ ಮಕ್ಕಳ ಮುಂದಿನ ಕತೆ ಏನು? ನಮ್ಮ ಭಾಗದ ಕುಟುಂಬದಲ್ಲಿ ಮಕ್ಕಳು ಬೆಂಗಳೂರು ಅಥವಾ ವಿದೇಶದಲ್ಲಿ ಇದ್ದರೆ , ಮನೆಯಲ್ಲಿ ವಯಸ್ಸಾದವರು ಮಾತ್ರ , ಒಳ್ಳೆ ಆಸ್ಪತ್ರೆ ಅತ್ಯಗತ್ಯ ನಮ್ಮ ತಂದೆ ತಾಯಿ ಗಳಿಗೆ ತಕ್ಷಣ ಏನಾದರೂ ಆದರೆ ಎಲ್ಲಿ ಹೋಗಬೇಕು? ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.

ಒಂದು ದಿನ ಆದರೆ ಒಂದು ದಿನ ನಮ್ಮ ಜೊತೆ ಪಾದಯಾತ್ರೆ ಮಾಡಬಹುದು,
ನೀವೆಲ್ಲರೂ ನಿಮ್ಮ ಊರಿನ ಜನರ ಸಹಿಹಾಕಿಸಿ ಮನವಿ ಪತ್ರ ಕೊಟ್ಟರೆ ನಾನು ನನ್ನ ಪತ್ರದ ಜೊತೆ ನಿಮ್ಮ ಪತ್ರ ವನ್ನು. ಸರಕಾರಕ್ಕೆ ತಲುಪಿಸುತ್ತೆನೆ

ನಮ್ಮ ಊರಿನ ಎಲ್ಲಾ ಸಾಮಾಜಿಕ ಸಂಘಟನೆ ಯವರಲ್ಲಿ ನನಗೆ ಬೆಂಬಲ ಕೊಡಿ ಎಂಬುದಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ..

ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಎರಡು ಕಡೆ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ನಮ್ಮದು. ಜನರ ಹಿತದ ದೃಷ್ಟಿಯಲ್ಲಿ ಭೌಗೋಳಿಕ ವಿಸ್ತಾರದ ಕಾರಣಕ್ಕೂ ಇವೆರಡೂ ಕಡೆ ಅನಿವಾರ‍್ಯವಾಗಿ ಬೇಕು. 8 ಮೆಡಿಕಲ್ ಕಾಲೇಜಿವೆ. ಯಶಸ್ವಿಯಾಗಿ ನಡೆಯುತ್ತಿವೆ. ನಮ್ಮಲ್ಲಿ ಜಿಲ್ಲೆಯ ವಿಸ್ತಾರದ ಕಾರಣದಿಂದ ಎರಡು ಬೇಕು

ನಮಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡಿ ಎಂಬುದಾಗಿ ಕೇಳಿಕೊಳ್ಳುತ್ತೇವೆ

ಒಂದು ವೇಳೆ ಅದು ಅಸಾದ್ಯವಾದರೆ ಖಾಸಗಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದಾದರೆ ಸರ್ಕಾರ ಭೂಮಿ ಮತ್ತು ಮೂಲಭೂತ ಸೌಕರ್ಯಗಳನ್ನು,
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಅನುಮತಿ ನೀಡಿದರೆ ಹಣವನ್ನ ನಾನು ಹೊಂದಿಸುತ್ತದೆ

RELATED ARTICLES  ಸಂಗೀತ ಪರೀಕ್ಷೆಯಲ್ಲಿ ಕುಮಟಾ ಬಾಲಕಿಯರ ಸಾಧನೆ

ಸಂಪೂರ್ಣ ವ್ಯಾಪಾರ ದೃಷ್ಟಿಯಿಂದ ನೋಡುವ ಆಸ್ಪತ್ರೆ ಯಿಂದ ಏನೋ ಪ್ರಯೋಜನವಿಲ್ಲ ವ್ಯಕ್ತಿ ಸತ್ತ ಮೇಲೂ ಶವ ಇಟ್ಟುಕೊಂಡು ಹಣ ಮಾಡುವವರನ್ನು ಕಂಡಿದ್ದೇವೆ ನಮಗೆ ಸರ್ಕಾರಿ ಅಥವಾ ಚಾರಿಟೇಬಲ್ ಟ್ರಸ್ಟ್ ನಡೆಸುವ ಮಂಗಳೂರಿನ ಕೆ ಎಸ್ ಹೆಗಡೆ ತರಹ ಒಳ್ಳೆ ಆಸ್ಪತ್ರೆ ಬೇಕು 200 ಕೋಟಿ ಅಲ್ಲ 500 ಕೋಟಿ ವ್ಯವಸ್ಥೆ ಮಾಡೋಣ…

KIADB ಇಂಡಸ್ಟ್ರಿಯಲ್ ತರ ಮಾಡಬೇಕು ಭೂಮಿಯನ್ನ ಸರ್ಕಾರ ಸ್ವಾಧೀನ ಪಡಿಸಿ ಕೊಂಡು, ರಸ್ತೆ ನೀರು ವಿದ್ಯುತ್ ಎಲ್ಲ ಮೂಲಭೂತ ಸೌಕರ್ಯ ನಿರ್ಮಾಣ ಮಾಡಿ ಉದ್ಯಮ ದಾರರಿಗೆ ಕೊಟ್ಟು ೫ ವರ್ಷದ ಒಳಗೆ ಫ್ಯಾಕ್ಟರಿ ಪ್ರಾರಂಭ ಮಾಡುವಂತೆ ಆದೇಶ ಮಾಡುತ್ತದೆ ಆಗ ಉದ್ಯಮದಾರರು ಸಾವಿರಾರು ಕೋಟಿ ಹೂಡಿಕೆ ಮಾಡುತ್ತಾರೆ ಇಲ್ಲಿ ಕೂಡ , ಮೆಡಿಕಲ್ ಕಾಲೇಜು ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅನುಮತಿ, ಜಾಗ, ಮೂಲಭೂತ ಸೌಕರ್ಯ ಸರ್ಕಾರ ಒದಗಿಸಿಕೊಟ್ಟರೆ ಹಣವನ್ನ ನಾನು ವ್ಯವಸ್ಥೆ ಮಾಡುತ್ತೇನೆ

500 ಕೋಟಿ ಹೇಗೆ ಹಣ ವ್ಯವಸ್ಥೆ ?

ಇತ್ತೀಚೆಗೆ ತಾವು ನೋಡಿರಬಹುದು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಯವರು ಮುಂಬೈ ಐಐಟಿ ಗೆ 341 ಕೋಟಿ ಹಣ ದಾನ ಮಾಡಿದ್ದಾರೆ ಅವರು ನಮ್ಮ ಶಿರಸಿ ಮೂಲದವರು ಅಂತಹ ಮಹಾನುಭಾವರು ಪುಣ್ಯವಂತರು ನಮ್ಮ ದೇಶದಲ್ಲಿ ತುಂಬಾ ಜನ ಇದ್ದರೆ, ಎಲ್ಲ ದೊಡ್ಡ ದೊಡ್ಡ ಕಂಪನಿ ಗಳಲ್ಲಿ CSR ಫಂಡ್ 2% ಇರುತ್ತದೆ

ನಮ್ಮ ಉತ್ತರ ಕನ್ನಡದ ಜನ ಇಡೀ ಪ್ರಪಂಚದಾದ್ಯಂತ ಇದ್ದಾರೆ ಖಂಡಿತ ಸಹಾಯ ಮಾಡುತ್ತಾರೆ ನಾವು ಟ್ರಸ್ಟ್ ಮೂಲಕ ಈ ಜಿಲ್ಲೆಗೆ ಒಳ್ಳೆ ಆಸ್ಪತ್ರೆ ಮಾಡುತ್ತೇವೆ ಎಂದರೆ ಹಲವಾರು ದಾನಿಗಳು ಮುಂದೆ ಬರುತ್ತಾರೆ ಆ ಕೆಲಸ ನಾ ಮಾಡುತ್ತೇನೆ ಸರಕಾರ ದವರು ಜಾಗವನ್ನು ಕೊಟ್ಟು , ಅನುಮತಿ ಮತ್ತು ಮೂಲಭೂತ ಸೌಕರ್ಯ ನಿರ್ಮಾಣ ಮಾಡಬೇಕು ಅಷ್ಟೇ ಮೊದಲೇ ಹೇಳಿದಂತೆ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಅಥವಾ ಸರ್ಕಾರ – ಟ್ರಸ್ಟ – ಪಬ್ಲಿಕ್ ಸಹಯೋಗದಲ್ಲಿ ನಡೆಸಬೇಕು, ಆಗ ಮಾತ್ರ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುವುದು

ನಾನು ಇದೆಲ್ಲವನ್ನೂ ಯಾವುದೇ ರಾಜಕೀಯ ಉದ್ದೇಶಕ್ಕೆ ಮಾಡುತ್ತಿಲ್ಲ ಹಾಗಂತ ರಾಜಕೀಯ ಕೆಟ್ಟದ್ದಲ್ಲ ಕೆಲವು ರಾಜಕಾರಣಿ ಗಳು ಕೆಟ್ಟವರಿರಬಹುದು, ಎಲ್ಲ ರಂಗ ದಲ್ಲೀ ಕೆಟ್ಟವರು ಒಳ್ಳೆಯವರು ಇದ್ದೆ ಇರುತ್ತಾರೆ ಎಲ್ಲರೂ ಕೆಟ್ಟವರಲ್ಲ ಎಲ್ಲವರೂ ಒಳ್ಳೆಯವರಲ್ಲ ಇದು ಪ್ರಪಂಚದ ನಿಯಮ ಶ್ರೀ ನರೇಂದ್ರ ಮೋದಿ ಯವರೂ ಕೂಡ ರಾಜಕೀಯ ಕೆಟ್ಟದ್ದು ಅಂತ ದೂರವಿದ್ದಿದರೆ ನಮ್ಮ ದೇಶದ ಕಥೆ ಏನಾಗುತ್ತಿತ್ತು ಒಮ್ಮೆ ಯೋಚಸಿ? ಎಂದ ಅನಂತಮೂರ್ತಿ ಹೆಗಡೆ, ಪಾದಯಾತ್ರೆಯಲ್ಲಿ ಸುಮಾರು 5000 ರಿಂದ 10,000 ಜನ ಸೇರುವ ನಿರೀಕ್ಷೆಯಿದೆ ಎಂದರು.