ಕುಮಟಾ : ಬಾಡದ ನೇಸರ ರೆಸಾರ್ಟ್‍ನ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಲಭ್ಯವಾದ ನಿಖರ ಮಾಹಿತಿ ಆಧರಿಸಿ ಕುಮಟಾ ಪೊಲೀಸ್ ಅಧಿಕಾರಿಗಳು
ದಾಳಿ ನಡೆಸಿ, ಅಕ್ರಮ ಚಟುವಟಿಕೆಯ ಬಾಗೀಧಾರ ಎನ್ನಲಾದ ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ರೆಸಾರ್ಟ್‍ನಲ್ಲಿ ಸಂಗ್ರಹಿಸಲ್ಪಟ್ಟ 8 ಮೊಬೈಲ್, ಮಾತ್ರೆ ಪ್ಯಾಕೇಟ್ ಜೊತೆಗೆ 32 ಸಾವಿರ ರೂ. ಹಾಗೂ ಸಿ.ಸಿ ಟಿವಿ ಡಿವಿಆರ್, ಹಾಗೂ ದಾಖಲಾತಿ ರಿಜಿಸ್ಟರ್ ಇನ್ನಿತರ ದಾಖಲೆ ವಶಪಡಿಸಿಕೊಳ್ಳಲಾಗಿದೆ.

RELATED ARTICLES  ಯಕ್ಷಗಾನದ ಇಬ್ಬರು ದಿಗ್ಗಜರಿಗೆ ಪ್ರಶಸ್ತಿ ಪ್ರಕಟ

ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರಾಮಬೊಡ್ಡಿಯ ನಾಗೇಶ ಮಂಜಪ್ಪ ಶೆಟ್ಟಿ, ಗುಲ್ಬರ್ಗಾ ಜೇವರ್ಗಿಯ ಅರೀಫ್ ಮುಲ್ಲಾ ಹುಸೇನ ಸಾಬ್, ಪಿಂಕಿ, ನೇಸರ ರೆಸಾರ್ಟ್ ಮಾಲಿಕ ಸೇರಿ ವೇಶ್ಯವಾಟಿಕೆ ನಡೆಸುತ್ತಿದ್ದ ಆರೋಪಿತರು ಎಂದು ಪ್ರಕರಣ ದಾಖಲಾಗಿದೆ. ಆರೋಪಿತರಾದ ನಾಗೇಶ ಮಂಜಪ್ಪ ಶೆಟ್ಟಿ, ಅರೀಫ್ ಮುಲ್ಲಾ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ತನಿಖೆ ಮುಂದುವರೆಸಿದ್ದಾರೆ.

ತಮ್ಮ ಲಾಭಕ್ಕೋಸ್ಕರ ಬೇರೆ ಬೇರೆ ಕಡೆಯಿಂದ ಮಹಿಳೆಯರನ್ನು ಕರೆಯಿಸಿ, ತಮ್ಮ ರೆಸಾರ್ಟ್ ಕಟ್ಟಡದಲ್ಲಿ ವೇಶ್ಯಾವಾಟಿಕೆಯಂತಹ ಅನೈತಿಕ ಚಟುವಟಿಕೆಗಳನ್ನು ನಡೆಸಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದರು ಎಂಬ ಖಚಿತ ಮಾಹಿತಿ ಆಧರಿಸಿ ದಾಳೆ ನಡೆಸಿದ ಪೊಲೀಸರು ನಾಲ್ವರ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಟ್ಕಳ ಡಿವೈಎಸ್‍ಪಿ ಶ್ರೀಕಾಂತ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕುಮಟಾ ಪಿಎಸ್‍ಐ ನವೀನ ನಾಯ್ಕ ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

RELATED ARTICLES  ಬಿಜೆಪಿ ಅಭ್ಯರ್ಥಿ ಕಾಗೇರಿ ಗೆಲುವು.