ಕುಮಟಾ ತಾಲೂಕಿನ ಕಾಗಾಲ ಗ್ರಾಮಪಂಚಾಯತ ವ್ಯಾಪ್ತಿಯ ಬೀರಕೋಡಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಉದಾರವಾಗಿ ಸ್ಥಳದಾನ ಮಾಡಿದ ಶ್ರೀಮತಿ ಪದ್ಮಾವತಿ ಪದ್ಮಯ್ಯ ನಾಯ್ಕ ( ಜೈನ್ ) ಇವರನ್ನು ಹಾಗೂ ಇದಕ್ಕೆ ಸಹಕಾರ ನೀಡಿದ ಶಿವರಾಜ್ ನಾಯ್ಕ ಅವರನ್ನು ಇಲಾಖೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾಗಾಲದ ಘನತ್ಯಾಜ್ಯ ಘಟಕದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರು ಈ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತದ ಅಧ್ಯಕ್ಷೆ ಸಾವಿತ್ರಿ ಪಟಗಾರ ,ಉಪಾಧ್ಯಕ್ಷ ಪ್ರಶಾಂತ ಶೆಟ್ಟಿ ಕಾರ್ಯನಿರ್ವಹಣ ಅಧಿಕಾರಿ ನಾಗರತ್ನ ನಾಯ್ಕ ಪಿಡಿಓ ನವೀನ ನಾಯ್ಕ ಸಇಲಾಖಾ ಅಧಿಕಾರಿವರ್ಗದವರು ಅಂಗನವಾಡಿ ಮೇಲ್ವಿಚಾರಕಿ ಸುಶೀಲಾ ಮೊಗೇರ ಹಾಗೂ ಕಾರ್ಯಕರ್ತೆ ಶಿಲ್ಪಾ ಬೀರಕೋಡಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಉತ್ತರ ಕನ್ನಡದಲ್ಲಿ ಕಡಿಮೆಯಾಗಿದೆ ಕೊರೋನಾ ಕೇಸ್