ಬೆಂಗಳೂರು : ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (cell broadcasting system)ಸಹಯೋಗದೊಂದಿಗೆ ಸೆಲ್
ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಗಾಗಿ ಪ್ರಯೋಗಾರ್ಥ ಪರೀಕ್ಷೆಯನ್ನು ಇಂದು ಕರ್ನಾಟಕದಾಧ್ಯಾಂತ ಕೈಗೊಂಡಿದೆ. ಧ್ವನಿ ಮತ್ತು ಕಂಪನಗಳೊಂದಿಗೆ ನಿಮ್ಮ ಮೊಬೈಲಿಗೆ ಪರೀಕ್ಷಾ ಎಚ್ಚರಿಕೆಯ ಸಂದೇಶಗಳು(Message) ಬರಬಹುದು. ಈ
ಸಂದೇಶಗಳು ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದು, ಇದು ನೈಜ ಸ್ಥಿತಿಯನ್ನು ಸೂಚಿಸುವುದಿಲ್ಲ. ಆದ್ದರಿಂದ ದಯವಿಟ್ಟು ತಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ ಎಂದು ಭಾರತೀಯ ದೂರ ಸಂಪರ್ಕ ಇಲಾಖೆ ತಿಳಿಸಿದೆ.
ಇದು ಕೇವಲ ಟೆಸ್ಟಿಂಗ್ ಅಲರ್ಟ್ ಮೆಸೇಜ್ ಅಷ್ಟೆ .(testing alert message) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ( National Disaster management) ಇಂದು ಕರ್ನಾಟದಲ್ಲಿ ತುರ್ತು ಎಚ್ಚರಿಕಾ ವ್ಯವಸ್ಥೆ ಪರೀಕ್ಷಾರ್ಥ ನೀಡಿದ ಮೆಸೇಜ್ ಆಗಿದೆ.
ಸಾರ್ವಜನಿಕ ಸುರಕ್ಷತೆ ತುರ್ತು ಸಂದರ್ಭದಲ್ಲಿ ಸಕಾಲಿಕ ಎಚ್ಚರಿಕೆ ನೀಡಲು ಪ್ಯಾನ್ ಇಂಡಿಯಾದಲ್ಲಿ ಅಲರ್ಟ್ ಕ್ಯಾಂಪೇನ್ ಮಾಡುತ್ತಿದೆ. ಹೀಗಾಗಿ ರಾಜ್ಯದ ಜನರಿಗೆ ಮೊಬೈಲ್ ನಲ್ಲಿ ಈ ಸಂದೇಶ ಬರಲಿದ್ದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದು ಪರಿಕ್ಷಾರ್ಥ ಮಾತ್ರ ವಾಗಿದೆ.