ಕುಮಟಾ : ಜಲಜೀವನ್ ಮಿಷನ್ ನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸ್ಥಳ ಬದಲಾವಣೆ ಕುರಿತಂತೆ ಎದ್ದಿರುವ ಕೂಗು, ಗಟ್ಟಿಗೊಳ್ಳುತ್ತಿದ್ದು ಮೂರೂರು ವಾಟೆಕೇರಿಯಬಳಿ ಮಂಗಳವಾರ ಗ್ರಾಮಸ್ಥರು ಮತ್ತು ರೈತ ಹೋರಾಟ ಸಮೀತಿ ಜಂಟಿಯಾಗಿ ಪೈಪ್ ಅಳವಡಿಕೆ ಕಾಮಗಾರಿಯನ್ನು ನಿಲ್ಲಿಸಿದ ಘಟನೆ ನಡೆದಿದೆ.
ತೀವ್ರ ವಿರೋಧ, ಮತ್ತು ಸ್ಥಳ ಬದಲಾವಣೆಗೆ ಹೋರಾಟ ನಡೆಯುತ್ತಿದೆ. ಅದಲ್ಲದೆ ಈ ಬಗ್ಗೆ ಪ್ರಧಾನ ಮಂತ್ರಿಗಳೇ ಪರಿಶೀಲನೆ ನಡೆಸಲು ಆದೇಶಿಸಲಾಗಿದ್ದು, ಈ ಬಗ್ಗೆ ಸ್ಥಳೀಯ ಶಾಸಕರಲ್ಲಿ ವಿನಂತಿಸಿದಾಗ ಅವರೂ ಸ್ಥಳ ಬದಲಾವಣೆಗೆ ಒಪ್ಪಿಗೆ ನೀಡಿರುವ ಮಾಹಿತಿ ನೀಡುತ್ತಿರುವ ಸ್ಥಳೀಯ ಜನರು. ಇಂತಹ ಸಂದರ್ಭದಲ್ಲಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ರೈತ ಹೋರಾಟ ಸಮಿತಿಯ ಅಧ್ಯಕ್ಷ ಗಣಪತಿ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದರು. ಗ್ರಾಮಸ್ಥರು ಮತ್ತು ಸಮಿತಿಯ ಜೊತೆಗೆ ಮುಖಂಡರುಗಳಾದ ಗಿರಿಯ ಗೌಡ, ಟಿ. ಪಿ. ಹೆಗಡೆ, ಹನುಮಂತ ಗೌಡ, ರಾಧಾಕೃಷ್ಣ ಗೌಡ, ಸಿ. ಜಿ. ಹೆಗಡೆ, ಎಸ್ ವಿ. ಭಟ್ಟ, ಹರಿಶ್ಚಂದ್ರ ಹೆಗಡೆ, ಟಿ. ಆರ್. ಜೋಶಿ ಮುಂತಾದವರು ಹಾಜರಿದ್ದು ಕಾಮಗಾರಿ ನಿಲ್ಲಿಸಿದ್ದಾರೆ.
ಮುಂದಿನ ಹಂತದಲ್ಲಿ ಇದೆ ರೀತಿಯಲ್ಲಿ ಉದ್ದಟತನ ತೋರಿದಲ್ಲಿ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಗಣಪತಿ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು