ಕುಮಟಾ : ಕರ್ನಾಟಕ ಸಾಹಿತ್ಯ ಪರಿಷತ್ ಕುಮಟಾ ಘಟಕ ಹಾಗೂ ರೋಟರಿ ಕ್ಲಬ್ ಕುಮಟಾ ಇವರ ಸಹಯೋಗದೊಂದಿಗೆ ಕುಮಟಾ ತಾಲೂಕಿನ ತೃತೀಯ ವರ್ಷದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕುಮಟಾ ನಾದಶ್ರೀ ಕಲಾಕೇಂದ್ರದಲ್ಲಿ ಅ.೨೯ ರಂದು ರವಿವಾರದಂದು ಬೆಳಿಗ್ಗೆ ೯.೩೦ ಗಂಟೆಗೆ ನಡೆಸಲು ತೀರ್ಮಾನಿಸಲಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷತೆಗೆ ಹಿರಿಯ ಚುಟುಕು ಸಾಹಿತಿಗಳಾದ ಬೀರಣ್ಣ ನಾಯಕ ಕುಮಟಾ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತ ಕುಮಟಾ ಘಟಕ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ.

ಸಮ್ಮೇಳನದ ಅಂಗವಾಗಿ ಜಿಲ್ಲಾ ಮಟ್ಟದ ಮುಕ್ತ ಚುಟುಕು ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಆಯ್ಕೆಯಾದ ಚುಟುಕುಗಳನ್ನು ಸಮ್ಮೇಳನದ ಸಂಚಿಕೆಯಲ್ಲಿ ಪ್ರಕಟಿಸಿ ಸಮ್ಮೇಳನದಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು ನಿರ್ಣಯಿಸಲಾಗಿದೆ. ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಚುಟುಕು ಸಾಹಿತ್ಯಾಭಿಮಾನಿಗಳು ತಮ್ಮ ತನು-ಮನ-ಧನದ ಸಹಕಾರ ನೀಡುವಂತೆ ಸಂಘಟಕರು ಕೋರಿದ್ದಾರೆ. 

RELATED ARTICLES  SSLC Exam - ಅಂತಿಮ ವೇಳಾಪಟ್ಟಿ ಪ್ರಕಟ.

ಚುಟುಕು ಸ್ಫರ್ಧೆಗೆ ಚುಟುಕುಗಳನ್ನು ಕಳುಹಿಸುವವರು ತಮ್ಮ ಚುಟುಕು ಗಳೊಂದಿಗೆ ತಮ್ಮ ಸ್ವ ವಿವರ ಮತ್ತು ಭಾವಚಿತ್ರವನ್ನು ಅ. ೨೨ ರ ಒಳಗೆ (ಉದಯ ಎಸ್. ಮಡಿವಾಳ, ಪೋಸ್ಟ್ ಹೆಗಡೆ, ತಾಲೂಕು ಕುಮಟಾ, ೫೮೧ ೩೩೦ 

ಮೊ.: ೯೦೦೮೮೧೦೫೯೨) ಕಳುಹಿಸಲು ತಿಳಿಸಲಾಗಿದೆ. ಇದು ಮುಕ್ತ ಸ್ಪರ್ಧೆಯಾಗಿದ್ದು ವಯಸ್ಸಿನ ಯಾವುದೇ ನಿರ್ಭಂಧವಿರುವುದಿಲ್ಲ. ಒಬ್ಬರು ೪ ಚುಟುಕುಗಳನ್ನು ಮಾತ್ರ ಕಳುಹಿಸತಕ್ಕದ್ದು. ಇದರಲ್ಲಿ ೨ನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹಾಗೂ ಆಯ್ಕೆಯಾದ ೨ ಚುಟಕುಗಳನ್ನು ಸಮ್ಮೇಳನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು. ನೀವು ಕಳುಹಿಸುವ ಚುಟುಕಿನಲ್ಲಿ ಒಂದು ಆಶಯ ಹಾಗೂ ಸಮಾಜಕ್ಕೊಂದು ಸಂದೇಶವಿರಲಿ. ಆಯ್ಕೆಯಾದ ಉತ್ತಮ ೩ ಚುಟುಕುಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಲಾಗುವುದು. ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣ ಸಂಚಿಕೆ ನೀಡಲಾಗುವುದು. ಸಮಿತಿಯ ತೀರ್ಮಾನವೇ ಅಂತಿಮವಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಗಣಪತಿ ಎಂ. ಅಡಿಗುಂಡಿ  ಹಾಗೂ ಕಾರ್ಯದರ್ಶಿ ಉದಯ ಮಡಿವಾಳ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

RELATED ARTICLES  ಉಚಿತ ಗೋಯಿಂಗ್ ಡಿಜಿಟಲ್ ತರಬೇತಿ