ಭಟ್ಕಳ: ಕರ್ತವ್ಯಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಸರಕಾರಿ ಆಸ್ಪತ್ರೆಯ ಚರ್ಮರೋಗ ವೈದ್ಯನೊಬ್ಬ ನಾಪತ್ತೆಯಾಗಿರುವ ಘಟನೆ ಭಟ್ಕಳ ನಗರದಲ್ಲಿ ನಡೆದಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚರ್ಮರೋಗ ವೈದ್ಯರಾಗಿದ್ದ ಎಚ್.ಟಿ ಉಮೇಶ್ ನಾಪತ್ತೆ ಯಾಗಿರುವ ವೈದ್ಯ ಎಂದು ಗುರುತಿಸಲಾಗಿದೆ.

RELATED ARTICLES  ಅಕ್ರಮ ಚಿನ್ನ ಸಾಗಾಟ ಆರೋಪ : ಭಟ್ಕಳದ ವ್ಯಕ್ತಿ ವಶಕ್ಕೆ ಪಡೆದ ಅಧಿಕಾರಿಗಳು

ಇವರು ಮೂಲತಃ ನಿಟ್ಟೂರು, ಹರಪನಹಳ್ಳಿ ನಿವಾಸಿಯಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಭಟ್ಕಳದ ಡಿ.ಪಿ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಅಕ್ಟೋಬರ್ 10ರಂದು ಬೆಳಗ್ಗೆ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋಗಿದ್ದರು ಎನ್ನಲಾಗಿದೆ. ಕರ್ತವ್ಯ ಮುಗಿದ ಬಳಿಕ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.
ಇನ್ನೂ ಇವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ನಾಪತ್ತೆಯಾಗಿರುವ ಡಾ. ಉಮೇಶ್‌ಗಾಗಿ
ಹುಡುಕಾಟ ನಡೆಸಿರುವ ಕುಟುಂಬಸ್ಥರು ಭಟ್ಕಳ
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ನಾಳೆ ಮಾತಾ ಮಹಿಮಾ ಪುಸ್ತಕ ಲೋಕಾರ್ಪಣೆ