ದಾಂಡೇಲಿ : 14 ವರ್ಷ ವಯೋಮಿತಿಯ ಬಾಲಕಿಯರ ಚೆಸ್ ಸರ್ಧೆಯಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಗ್ರಣೀಯ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ನಗರದ ಕಾಮತ್ ರಿಪ್ರೆಶ್ಮೆಂಟ್ ಮಾಲಕ ನವೀನ ಕಾಮತ್ ಹಾಗೂ ನಿವೇದಿತಾ ಕಾಮತ್ ದಂಪತಿಗಳ ಸುಪುತ್ರಿ, ಸ್ಥಳೀಯ ಜೆವಿಡಿ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿಯಾಗಿರುವ ನಿಕಿತಾ ಕಾಮತ್ ಈಕೆ ಇದೀಗ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

RELATED ARTICLES  ಇಂದಿನ(ದಿ-23/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟು 9 ಸುತ್ತುಗಳು ನಡೆದಿದ್ದು, 7 ಸುತ್ತುಗಳಲ್ಲಿ ಜಯಭೇರಿ ಭಾರಿಸಿದ ಈಕೆ ರಾಜ್ಯಕ್ಕೆ 19 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಮೊದಲಿಗಳಾಗಿ ಗಮನ ಸೆಳೆದಿದ್ದಾಳೆ. ಈಕೆಯ ಸಾಧನೆಗೆ ನಗರದ ಜೆವಿಡಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಹಾಗೂ ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಎಸ್.ಪ್ರಕಾಶ ಶೆಟ್ಟಿ, ಕಲಾಶ್ರೀ ಸಂಸ್ಥೆಯ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ವಿಷ್ಣುಮೂರ್ತಿ ರಾವ್, ಸುರೇಶ ಕಾಮತ್, ಪ್ರಮೋಧ ಶಾನಬಾಗ್, ಬಿ.ಎನ್.ವಾಸರೆ, ಕೀರ್ತಿ ಗಾಂವಕರ, ರಾಮಚಂದ್ರ ಹೆಬ್ಬಾರ್, ಗಣೇಶ ಹೆಬ್ಬಾರ್, ಸಂಜೀವ ಮೊಗವೀರ, ಉದಯ ಶೆಟ್ಟಿ, ಚಂದ್ರು ಶೆಟ್ಟಿ, ನಾಗರಾಜ ಶೆಟ್ಟಿ, ಶೇಖರ ಪೂಜಾರಿ, ಸೋಹನ್ ಶೆಟ್ಟಿ, ಕೆ.ಸಿ.ಸರ್ಕಲ್ ಗಣೇಶ ಮಂಡಳದ ಅಧ್ಯಕ್ಷ ಹಾಗೂ ಉದ್ಯಮಿ ಟಿ.ಆರ್.ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಎಸ್.ಸೋಮಕುಮಾರ್ ಹಾಗೂ ಪದಾಧಿಕಾರಿಗಳು ಮತ್ತು ನಗರದ ಗಣ್ಯರನೇಕರು ಹರ್ಷವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಜನವರಿ 1 ರಿಂದ ₹ 2,000ವರೆಗಿನ ಡೆಬಿಟ್‌ ಕಾರ್ಡ್‌ ವಹಿವಾಟಿನ ‘ಎಂಡಿಆರ್‌’ ಶುಲ್ಕ ಇಲ್ಲ