ಕುಮಟಾ : ಹೆದ್ದಾರಿ ಬದಿಯಲ್ಲಿ ತನ್ನ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೋರ್ವ, ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕಂಟೇನರ್ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ‌ ಕೋಟೆ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ದೇವು ಆಗೇರ (70) ಮೃತ ವ್ಯಕ್ತಿಯಾಗಿದ್ದಾರೆ.

RELATED ARTICLES  ಸೇತುವೆಯ ಮೇಲಿಂದ ಲಾರಿ ಪಲ್ಟಿ : ಭೀಕರ ಘಟನೆ ಕಂಡು ಜನ ಕಂಗಾಲು.

ಇವರು ಮಿರ್ಜಾನ ಕೋಟೆ ಕ್ರಾಸ್ ಬಳಿ ವಾಹನಕ್ಕಾಗಿ ಕಾಯುತ್ತಿದ್ದು, ಈ ವೇಳೆ ಕುಮಟ ಕಡೆಯಿಂದ ಅಂಕೋಲಾ‌ ಕಡೆ ಹೋಗುತ್ತಿದ್ದ ಕಂಟೇನರ್ ವಾಹನ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿ ಬಂದಿಯಲ್ಲಿ ವಾಹನಕ್ಕೆ ಕಾಯುತ್ತಿದ್ದ ದೇವು ಆಗೇರ ಅವರಿಗೆ ಡಿಕ್ಕಿ ಹೊಡದು ಸ್ಥಳದಲ್ಲಿ ನಿಲ್ಲಿಸದೆ ಚಲಿಸಿಕೊಂಡು ಹೋಗಿದ್ದ, ತಕ್ಷಣ ಸ್ಥಳೀಯರು ಅಪಘಾತಕ್ಕೆ ಕಾರಣವಾದ ವಾಹನವನ್ನ ಬೆನ್ನಟ್ಟಿ ಹಿಡಿದಿದ್ದಾರೆ.

RELATED ARTICLES  ಮಿರ್ಜಾನ್ ರೈಲ್ವೆ ಗೇಟ್ ಸಮೀಪ ರೈಲು ಬಡಿದು ವ್ಯಕ್ತಿ ಸಾವು.