ಕುಮಟಾ : ಸ್ನಾನಕ್ಕೆಂದು ನದಿಗೆ ತೆರಳಿದ ಯುವಕನೋರ್ವ ನದಿಯಲ್ಲಿ ಮುಳುಗಡೆಯಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಮಿರ್ಜಾನ ತಾರೀಬಾಗಿ‌ನ ಅಘನಾಶಿನಿ ನದಿಯಲ್ಲಿ ನಡೆದಿದೆ. ಕೃಷ್ಣ ಲಿಂಗಪ್ಪ ಅಂಬಿಗ (25) ಮೃತ ಯುವಕನಾಗಿದ್ದಾನೆ. ಈತ ಕೂಲಿಕೆಲಸಗಾರನಾಗಿದ್ದು, ತಾರೀಬಾಗಿ ಗ್ರಾಮದ ಅಘನಾಶಿನಿ ನದಿಯಲ್ಲಿ ಸ್ನಾನಕ್ಕೆ ನದಿಗೆ ಇಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾ‌‌ನೆ. ಯುವಕ ನದಿಯಲ್ಲಿ ಮುಳುಗಡೆಯಾದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುಳುಗಡೆಯಾಗಿದ್ದ ಯುವಕ ಶವ ಮೇಲಕ್ಕೆತ್ತಿದ್ದಾರೆ.

RELATED ARTICLES  ಅನಿಕೇತನ ಸಂಸ್ಕøತಿ ಅಧ್ಯಯನ ಕೇಂದ್ರ ಆಯೋಜಿಸಿದ 8ನೇ ವರ್ಷದ "ಮಕ್ಕಳ ಹಬ್ಬ" ಬೇಸಿಗೆ ಶಿಬಿರ ಉದ್ಘಾಟನೆ