ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ಸುಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ
ಚಲಾಯಿಸಿದ ಪರಿಣಾಮ ಬಸ್ ಹೆದ್ದಾರಿ ಬದಿಯ ತಗ್ಗಿನಲ್ಲಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

RELATED ARTICLES  ತಂದೆ ಕಾರ್ಯ ನಡೆಯುತ್ತಿದ್ದ ಮನೆಯಲ್ಲಿ ಅವಘಡ

ಸಾಗರ ಕಡೆಯಿಂದ ಹೊನ್ನಾವರ ಮಾರ್ಗವಾಗಿ ಬಸ್ ಚಲಾಯಿಸುತ್ತಿರುವಾಗ ಘಟನೆ ನಡೆದಿದೆ. ಬಸ್ ಚಾಲಕ ಗೋಪಾಲ ಅನಂತನಾಗ ಎಂದು ಗುರುತಿಸಲಾಗಿದೆ. ಗಾಯಾಳುಗಳೆಲ್ಲರೂ ಬೆಂಗಳೂರು ಚಿಕ್ಕಮಾವಳ್ಳಿಯ ನಿವಾಸಿಗಳಾದ ಎನ್.ಮಂಜುನಾಥ, ಸಮ್ಯಕಪ್ರವರ್ಧನ್
ಬಿ.ಎಮ್,ಬನ್ನೇರುಘಟ್ಟ ರಸ್ತೆ ವಿವರ್ಸ ಕಾಲೋನಿ
ಗೋಟ್ಟಿಗೇರೆಯ ಮುನಿಶಂಕರ, ಗುಣಶೇಖರ, ಮೇಘನಾ ಮುನಿಶಂಕರ ಎನ್, ಜಿ.ಶಂಕರ, ಕಾರ್ತಿಕ.ಸಿ, ಹರ್ಷವರ್ಧನ ಎಂದು ಗುರುತಿಸಲಾಗಿದೆ.

RELATED ARTICLES  ಮಿರ್ಜಾನ್ ರೈಲ್ವೆ ಗೇಟ್ ಸಮೀಪ ರೈಲು ಬಡಿದು ವ್ಯಕ್ತಿ ಸಾವು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳಕ್ಕೆ ಪೊಲೀಸರು ಭೇಟಿ
ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತಾಗಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.