ಶಿರಸಿ: ತಾಲೂಕಿನ ಹುಲೇಕಲ್ ಹತ್ತಿರದ ಪಾಂಡವರ ಹೊಳೆಯಲ್ಲಿ ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ನಡೆದಿದೆ. ಮೇಘಾಲಯ ಮೂಲದ ಮಂಗಳೂರಿನ ಕಲ್ಲಡ್ಕ ನಿವಾಸಿಯಾಗಿದ್ದ ಡಿಯೊಬೆಟ್ ಮಿಡ್ಕರ್ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.

RELATED ARTICLES  ಭಟ್ಕಳದಲ್ಲಿ ಮಳೆಯ ಅಬ್ಬರ: ಮನೆಯ ಮೇಲೆ ಎರಗಿದವು ಮರಗಳು!

ಈತನ ಗೆಳೆಯನಾಗಿದ್ದ ಹೊನ್ನೆಗದ್ದೆಯ ಚಿರಾಗ್ ಎಂಬಾತನ ಮನೆಗೆ ಬಂದಿದ್ದು, ಪಾಂಡವರ ಹೊಳೆಯಲ್ಲಿ ಈಜಾಡಲು ಗೆಳೆಯನ ಜೊತೆ ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಡಿವೈಎಸ್ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಐ ಸೀತಾರಾಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತಾಗಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

RELATED ARTICLES  “ಟಿ.ಎಸ್.ಎಸ್” ನಲ್ಲಿ ಫೆಬ್ರವರಿ 8 ಮತ್ತು 9 ರಂದು “ಫರ್ನಿಚರ್ ಮೇಳ” ಹಾಗೂ “ಕಬ್ಬಿನ ಹಬ್ಬ”